ಮುಂಬೈ: ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶಿಸಿರುವ ಮೊದಲ ಸಿನಿಮಾ “ದಿ ಬಾ**ಡ್ಸ್ ಆಫ್ ಬಾಲಿವುಡ್”* ಗುರುವಾರ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಖ್ಯಾತ ನಿರ್ದೇಶಕ ಕರಣ್ ಜೋಹರ್, “ಪಿಕ್ಚರ್ ಅಭಿ ಬಾಕಿ ಹೈ (ಚಿತ್ರ ಇನ್ನೂ ಮುಗಿದಿಲ್ಲ)” ಎಂಬ ಸಂದೇಶದೊಂದಿಗೆ ಆರ್ಯನ್‌ಗೆ ಶುಭ ಹಾರೈಸಿದ್ದಾರೆ.
ಐನ್ಸ್‌ಟಾಗ್ರಾಂನಲ್ಲಿ ಆರ್ಯನ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಕರಣ್, “ಮಗನೇ ಹೊಳೆಯಲಿ! ಇಂದು ನಿನ್ನ ದೊಡ್ಡ ರಾತ್ರಿ… ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ನಿನ್ನನ್ನು ಸಿನೆಮಾ ಲೋಕಕ್ಕೆ ಸ್ವಾಗತಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿನ್ನ ದುಡಿಮೆ ಮತ್ತು ಉತ್ಸಾಹವನ್ನು ನಾನು ನೋಡಿದ್ದೇನೆ. ನೀಡಲಾದ ಅವಕಾಶವನ್ನು ನೀನು ಲಘುವಾಗಿ ತೆಗೆದುಕೊಳ್ಳದೇ, ನಿನ್ನದೇ ಶೈಲಿಯಲ್ಲಿ ಕಥೆಯನ್ನು ಹೇಳಲು ತೊಡಗಿದ್ದೀ. ‘ದಿ ಬಾ**ಡ್ಸ್ ಆಫ್ ಬಾಲಿವುಡ್’* ಮೂಲಕ ನಿನ್ನ ದೃಷ್ಟಿಕೋನವನ್ನು ಎಲ್ಲರೂ ಕಾತುರದಿಂದ ನೋಡಲಿದ್ದಾರೆ,” ಎಂದು ಹೇಳಿದ್ದಾರೆ.


























































