ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಹಾಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ, ಡಿಕೆಶಿಯವರು ತಮ್ಮ ನಡೆಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.
ಅದೇ ಹೊತ್ತಿಗೆ, ಸಾಮಾಜಿಕ ಮಾಧ್ಯಮ ‘X’ನ ಜಾತ್ಯತೀತ ಜನತಾ ದಳ (Janata Dal Secular) ಖಾತೆಯಲ್ಲಿ ಅಚ್ಚರಿಯ ಪೋಸ್ಟ್ ರಾರಾಜಿಸಿದೆ. ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರ ಶಿಸ್ತು ಕ್ರಮ ಸಮಿತಿಯ ಶಿಫಾರಸಿನ ಮೇರೆಗೆ, ಎಐಸಿಸಿ ಅನುಮೋದನೆಗೆ ಒಳಪಟ್ಟು, ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಲಾಗಿದೆ’ ಎಂದು ಪೋಸ್ಟ್ ಹಾಕಲಾಗಿದೆ.
ಈ ಬೆಳವಣಿಗೆಯನ್ನು ಪ್ರದೇಶ ಕಾಂಗ್ರೆಸ್ ಪಕ್ಷ ಅಲ್ಲಗಳೆದಿದೆ. ಈ ಪೋಸ್ಟ್’ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಪಕ್ಷ, ಬಿಜೆಪಿ+ಜೆಡಿಎಸ್ = ಸುಳ್ಳಿನ ಡಬಲ್ ಎಂಜಿನ್ ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ಬಿಜೆಪಿ ಜೊತೆ ಸೇರಿದ್ದೇ ಸೇರಿದ್ದು, ಬಿಜೆಪಿಯವರೇ ನಾಚಿ ನೀರಾಗುವಂತೆ ಜೆಡಿಎಸ್, ಸುಳ್ಳು ಸುದ್ದಿಗಳ ಕಾರ್ಖಾನೆ ಆರಂಭಿಸಿ, ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತಿದೆ ಎಂದು ಹೇಳಿದೆ.
ಹೋಗಲಿ ಬಿಡಿ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎದುರಿಸಲಾಗದೇ ಕಂಗೆಟ್ಟು ಕೂತಿರುವ ನಿಮಗೆ, ಈ ರೀತಿ ಭ್ರಮೆಯಲ್ಲಿ ಬದುಕದೇ ಬೇರೆ ದಾರಿಯಾದರೂ ಏನಿದೆ ಅಲ್ಲವೇ? ಎಂದೂ ಪ್ರಶ್ನಿಸಿದೆ.
ಬಿಜೆಪಿ+ಜೆಡಿಎಸ್ = ಸುಳ್ಳಿನ ಡಬಲ್ ಎಂಜಿನ್
ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ಬಿಜೆಪಿ ಜೊತೆ ಸೇರಿದ್ದೇ ಸೇರಿದ್ದು, ಬಿಜೆಪಿಯವರೇ ನಾಚಿ ನೀರಾಗುವಂತೆ ಜೆಡಿಎಸ್, ಸುಳ್ಳು ಸುದ್ದಿಗಳ ಕಾರ್ಖಾನೆ ಆರಂಭಿಸಿ, ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತಿದೆ.
ಹೋಗಲಿ ಬಿಡಿ, @DKShivakumar ನೇತೃತ್ವದ… https://t.co/sksBPkmf3m pic.twitter.com/96e5DTEyRM
— Karnataka Congress (@INCKarnataka) August 26, 2025