ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನಲ್ಲಿ ಸುಜುಕಿಯ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ (BEV) ‘ಮೇಡ್ ಇನ್ ಇಂಡಿಯಾ – ಇ-ವಿಟಾರಾ’ ಅನ್ನು ಜಗತ್ತಿಗೆ ಪರಿಚಯಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಜಪಾನ್ ರಾಯಭಾರಿ ಕೀಚಿ ಒನೊ ಉಪಸ್ಥಿತರಿದ್ದರು.
ಈ ಇ-ವಿಟಾರಾವನ್ನು ಯುರೋಪ್, ಜಪಾನ್ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಲಿದೆ. ಪ್ರಧಾನಿ ಮೋದಿ ಅವರು, “ಇದು ಭಾರತದ ಸ್ವಾವಲಂಬನೆಗಾಗಿ ವಿಶೇಷ ದಿನ” ಎಂದು ಹೇಳಿದ್ದಾರೆ.
ಗುಜರಾತ್‌ನ TDS ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌ಗಳ ಸ್ಥಳೀಯ ಉತ್ಪಾದನೆಯೂ ಪ್ರಾರಂಭವಾಗಲಿದೆ. ತೋಷಿಬಾ, ಡೆನ್ಸೊ ಹಾಗೂ ಸುಜುಕಿಯ ಜಂಟಿ ಯೋಜನೆಯಾದ ಈ ಘಟಕವು ದೇಶೀಯ ಉತ್ಪಾದನೆಗೆ ಹಾಗೂ ಶುದ್ಧ ಇಂಧನ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಿದೆ.
ಮೋದಿ ಅವರು ಈ ಸಂದರ್ಭದಲ್ಲಿ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ್ ಭಾರತ್’ ಬದ್ಧತೆಯನ್ನು ಪುನರುಚ್ಚರಿಸಿದರು. ಹಂಸಲ್‌ಪುರ ಘಟಕದಲ್ಲಿ ವಾಣಿಜ್ಯ ಉತ್ಪಾದನೆ ಆರಂಭವಾದ ಬಳಿಕ, ಭಾರತವು ಸುಜುಕಿಯ ವಿದ್ಯುತ್ ವಾಹನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲಿದೆ.