ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ವಿರುದ್ಧ ಸಿಡಿದೆದ್ದ ಉದ್ಯಮಿ ಎಲಾನ್ ಮಸ್ಕ್ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅಮೇರಿಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅಷ್ಟರಲ್ಲೇ, ಎಲಾನ್ ಮಸ್ಕ್ ಅವರ ಎಕ್ಸ್ ಸಾಮಾಜಿಕ ಜಾಲತಾಣ ಸಂಸ್ಥೆಯಲ್ಲೂ ಬಿರುಗಾಳಿ ಎದ್ದಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ‘ಎಕ್ಸ್’ ಸಾಮಾಜಿಕ ಜಾಲತಾಣ ಸಂಸ್ಥೆಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಿಂಡಾ ಯಾಕರಿನೊ ಅವರು ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಸಾಮಾಜಿಕ ಜಾಲತಾಣ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಕಳೆದ 2 ವರ್ಷಗಳಿಂದ ‘ಎಕ್ಸ್’ ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದ ಅವರು ಹಿಂದಿನ ‘ಟ್ವಿಟರ್’ ಕಂಪನಿಯಲ್ಲಿನ ತಮ್ಮ ಅಧಿಕಾರಾವಧಿ ಬಗ್ಗೆ ಉಲ್ಲೇಖಿಸಿ ಭಾವನಾತ್ಮಕ ಸಂಗತಿಗಳನ್ನು, ಎಲಾನ್ ಮಸ್ಕ್ ಅವರ ಸಂಸ್ಥೆ ಹೇಗಿರಬೇಕೆಂಬ ಸಂಗತಿಗಳನ್ನು ಬರೆದುಕೊಂಡಿದ್ದಾರೆ. ಈ ರೀತಿಯ ಸಂಗತಿ ಬಗ್ಗೆ ವಿಶ್ಲೇಷಣೆ ಮಾಡಿರುವ ಮಾರುಕಟ್ಟೆ ತಜ್ಞರು ಎಲಾನ್ ಮಸ್ಕ್ ಅವರ ನಿಲುವಿನಿಂದ ಅವರ ಬಳಗದವರೇ ದೂರ ಸರಿಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.