(ಚಿತ್ರ : ಮಂಜು ನೀರೇಶ್ವಾಲ್ಯ)
ಮಂಗಳೂರು: ಆಸ್ತಿಕರ ನಾಡು, ರಾಜ್ಯ ಕರಾವಳಿ ಇದೀಗ ಸಾಲು ಸಾಲು ವೈದ್ಧಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿವೆ. ಅದರ ನಡುವೆಯೇ ಮಂಗಳೂರಿನಲ್ಲಿ ನೆರವೇರಿದ ‘ಮಹಾಮಾಯ ರಥೋತ್ಸವ’ವು ಮಹಾ ವೈಭವವಾಗಿ ಗಮನಸೆಳೆಯಿತು.
ಮಂಗಳೂರು ರಥಬೀದಿಯ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದಲ್ಲಿ ಅಭೂತಪೂರ್ವ ಉತ್ಸವ: ಭಕ್ತ ಸಾಗರದ ನಡುವೆ ‘ಬ್ರಹ್ಮರಥೋತ್ಸವ’ ವೈಭವ..
ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರಗಿತು.
ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು. ಯಜ್ಞ ಮಂಟಪದಲ್ಲಿ ನಡೆದ ಮಹಾ ಪೂರ್ಣಾಹುತಿ ಸಂದರ್ಭದಲ್ಲಿ ಧರ್ಮಿಕ ಪ್ರಮುಖರು ಯತಿಗಳು ಭಾಗಿಯಾದರು.
ಸಂಜೆ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣವು ಅನನ್ಯ ಮಹೋತ್ಸವವಾಗಿ ಆಸ್ತಿಕರ ಗಮನಕೇಂದ್ರೀಕರಿಸಿತು. ಭಕ್ತರು ರಥ ಎಳೆದು ಪುನೀತರಾದರು.

ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ.ಎ.ಶ್ರೀನಿವಾಸ್ ಕಾಮತ್, ಮಾರೂರ್ ಸುಧೀರ್ ಪೈ, ಪ್ರಕಾಶ್ ಕಾಮತ್, ಅನಂತ್ ಭಟ್, ಗಣೇಶ್ ಭಟ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಹಲವಾರು ಗಣ್ಯರು ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವವನ್ನು ಸಾಕ್ಷೀಕರಿಸಿದರು.