ಕನ್ನಡದ ‘ಬೇಡರ ಕಣ್ಣಪ್ಪ’ ಸಿನಿಮಾ ಒಂದು ಇತಿಹಾಸ. ಇದೀಗ ಅದೇ ಕತೆಯನ್ನು ಹೋಲುವಂತೆ ತೆಲುಗಿನಲ್ಲೂ ಸಿನಿಮಾ ಮಾಡಲಾಗುತ್ತಿದೆ. ‘ಕಣ್ಣಪ್ಪ’ ಹೆಸರಿನ ತೆಲುಗು ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಶನಿವಾರ ಬಿಡುಗಡೆ ಆಗಿದೆ.
ಹಿಂದಿ ಭಾಷೆಯಲ್ಲೂ ಟೀಸರ್ ಅನಾವರಣ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ತಾಗಿ ಸದ್ದುಮಾಡುತ್ತಿದೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ದೇವರಾಜ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.