ಲಕ್ನೋ: ಇಡೀ ಜಗತ್ತಿನ ಗಮನಸೆಳೆದಿದ್ದ ಪ್ರಯಾಗರಾಜ್ ಮಹಾ ಕುಂಭ 2025 ಪರಿಪೂರ್ಣವಾಗಿದೆ. ಈ ಕೈಂಕರ್ಯದ ಯಶಸ್ವಿಗೆ ಕಾರಣರಾದವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಮರಿಸಿದ್ದಾರೆ. ಮಹಾಕುಂಭ ಯಶಸ್ವಿ ಪೂರ್ಣಗೊಳಿಸುವಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದಿರುವ ಅವರು ಈ ಭವ್ಯ ಧಾರ್ಮಿಕ ಸಭೆಯನ್ನು “ಏಕತೆ, ಸಮಾನತೆ ಮತ್ತು ಸಾಮರಸ್ಯದ ಮಹಾಯಜ್ಞ” ಎಂದು ಕರೆದಿದ್ದಾರೆ.
ಪ್ರಧಾನಿ ಮೋದಿಯವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಸಿಎಂ ಯೋಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ಯಶಸ್ವಿ ಮಾರ್ಗದರ್ಶನದ ಪರಿಣಾಮವಾಗಿ ‘ಏಕತೆ, ಸಮಾನತೆ, ಸಾಮರಸ್ಯದ ಮಹಾಯಜ್ಞ’ – ಮಹಾ ಕುಂಭ 2025, ಪ್ರಯಾಗರಾಜ್ ಮುಕ್ತಾಯಗೊಂಡಿದೆ, ಭವ್ಯತೆ ಮತ್ತು ದೈವತ್ವದ ಜೊತೆಗೆ ಭದ್ರತೆ, ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಕಳೆದ 45 ಪವಿತ್ರ ದಿನಗಳಲ್ಲಿ, ಪೂಜ್ಯ ಸಂತರು ಮತ್ತು ಋಷಿಗಳು ಸೇರಿದಂತೆ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿಯಲ್ಲಿ ನಂಬಿಕೆಯ ಸ್ನಾನ ಮಾಡುವ ಮೂಲಕ ಆಶೀರ್ವದಿಸಲ್ಪಟ್ಟಿದ್ದಾರೆ” ಎಂದು ಯೋಗಿ ಹೇಳಿದ್ದಾರೆ. ಎಲ್ಲ ಜನರು ಒಂದೇ’ ಎಂಬ ಸಂದೇಶವನ್ನು ಹರಡುವ ಮತ್ತು ‘ವಸುಧೈವ ಕುಟುಂಬಕಂ’ ಎಂಬ ಪವಿತ್ರ ಭಾವನೆಯ ಅಡಿಯಲ್ಲಿ ಜಾಗತಿಕ ಏಕತೆಯನ್ನು ಬಲಪಡಿಸುವ ಮಾನವೀಯತೆಯ ಆಚರಣೆ ಎಂದು ಬಣ್ಣಿಸಿದ್ದಾರೆ. .