ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು “ನೀವೊಬ್ಬರು ಶ್ರೇಷ್ಠರು” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಗುರುವಾರ ಡೊನಾಲ್ಡ್ ಟ್ರಂಪ್ ಅವರು ನರೇಂದ್ರ ಮೋದಿ ಅವರನ್ನು ಶ್ವೇತಭವನದಲ್ಲಿ ಭೇಟಿಯಾದಾಗ ತಮ್ಮ ‘ಅವರ್ ಜರ್ನಿ ಟುಗೆದರ್’ ಪುಸ್ತಕದ ಸಹಿ ಮಾಡಿದ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
ಟ್ರಂಪ್ ಅವರು ತಮ್ಮ ಓವಲ್ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. “ನಿಮ್ಮನ್ನು ಶ್ವೇತಭವನದಲ್ಲಿ ಮತ್ತೆ ನೋಡಲು ನನಗೆ ಸಂತೋಷವಾಗಿದೆ” ಎಂದು ಮೋದಿ ಅವರು ಅಧ್ಯಕ್ಷ ಟ್ರಂಪ್ ಬಳಿ ಹೇಳಿದರು. “ನಾವು ನಿಮ್ಮನ್ನು ಕಳೆದುಕೊಂಡಿದ್ದೇವೆ, ನಾವು ನಿಮ್ಮನ್ನು ತುಂಬಾ ಕಳೆದುಕೊಂಡಿದ್ದೇವೆ” ಎಂದ ಟ್ರಂಪ್ ಮೋದಿ “ನಿಮ್ಮನ್ನು ಮತ್ತೆ ನೋಡಲು ಸಂತೋಷವಾಗಿದೆ” ಎಂದ ಸನ್ನಿವೇಶ ಗಮನಸೆಳೆಯಿತು.
President Trump often talks about MAGA.
In India, we are working towards a Viksit Bharat, which in American context translates into MIGA.
And together, the India-USA have a MEGA partnership for prosperity!@POTUS @realDonaldTrump pic.twitter.com/i7WzVrxKtv
— Narendra Modi (@narendramodi) February 14, 2025
ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಅವರು, ತಾಜ್ ಮಹಲ್‌ಗೆ ಭೇಟಿ ನೀಡಿದಾಗ 2020 ರ ಭಾರತಕ್ಕೆ ಐತಿಹಾಸಿಕ ಪ್ರವಾಸದ ಸ್ಮರಣೀಯ ಫೋಟೋವನ್ನು ಸಹ ಪ್ರಸ್ತುತಪಡಿಸಿದರು. ತಮ್ಮ ದೀರ್ಘ ಸ್ನೇಹವನ್ನು ಉಲ್ಲೇಖಿಸಿದರು. ತಮ್ಮ ಹಿಂದಿನ ಭೇಟಿಗಳನ್ನು ನೆನಪಿಸಿಕೊಂಡರು.’ನನ್ನ ಸ್ನೇಹಿತ ನರೇಂದ್ರ ಮೋದಿ, ಭಾರತದ ಪ್ರಧಾನಿ ಅವರನ್ನು ಶ್ವೇತಭವನಕ್ಕೆ ಮತ್ತೆ ಸ್ವಾಗತಿಸಲು ನನಗೆ ರೋಮಾಂಚನವಾಗಿದೆ’ ಎಂದು ಟ್ರಂಪ್ ನುಡಿದರು. “ನೀವು ವಿಶೇಷ ವ್ಯಕ್ತಿ” ಎಂದು ಅವರು ಮೋದಿ ಅವರನ್ನು ವರ್ಣಿಸಿದ ಪ್ರಸಂಗವೂ ಗಮನಸೆಳೆಯಿತು.
2020 ರಲ್ಲಿ ಭಾರತದಲ್ಲಿ ತಮಗೆ ಮತ್ತು ತಮ್ಮ ಪತ್ನಿ ಮೆಲಾನಿಯಾಗೆ ಪ್ರಧಾನಿ ಮೋದಿ ನೀಡಿದ ಆತಿಥ್ಯವನ್ನು ಅವರು ನೆನಪಿಸಿಕೊಂಡ ಟ್ರಂಪ್, ಆ ಆಥಿತ್ಯ ಬಗ್ಗೆ ಸಂತೋಷಪಡುತ್ತೇನೆ ಎಂದರು.
ಈ ಸನ್ನಿವೇಶದ ಫೋಟೋಗಳನ್ನು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
An excellent meeting with @POTUS @realDonaldTrump at the White House. Our talks will add significant momentum to the India-USA friendship! pic.twitter.com/lS7o4768yi
— Narendra Modi (@narendramodi) February 14, 2025