ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರವು ಶಿವರಾತ್ರಿಯ ಸಂದರ್ಭದಲ್ಲಿ ಕನ್ನಡದ ಜೊತೆಗೆ ತೆಲುಗು ಆವೃತ್ತಿಯೂ ಬಿಡುಗಡೆಯಾಗಲಿದೆ.
ಫೆಬ್ರುವರಿ 26 ರಂದು ಕನ್ನಡದ ಜೊತೆಗೆ ತೆಲುಗು ಆವೃತ್ತಿಯನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ವಿತರಕ ಎಂವಿಆರ್ ಕೃಷ್ಣ ಅವರು ಆಂಧ್ರ ಪ್ರದೇಶದಲ್ಲಿ ಈ ಸಿನಿಮಾ ವಿತರಣೆಗೆ ಮುಂದಾಗಿದ್ದಾರೆ.
ಹಾರರ್ ಚಿತ್ರ ‘ರಾಕ್ಷಸ’ದಲ್ಲಿ ಪ್ರಜ್ವಲ್ ದೇವರಾಜ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಗೌಡ, ದೀಪು, ಮತ್ತು ಮಾನಸ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀಧರ್, ಅರುಣ್ ರಾಥೋಡ, ಗೌತಮ್, ಸೋಮಶೇಖರ್ ಸಹಿತ ಹಲವರ ಅಭಿನಯ ಗಮನಸೆಳೆದಿದೆ.






















































