ಮಂಡ್ಯದ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ, ಮಂಡ್ಯದ ನಾಲ್ವಡಿ ಕಲಾಮಂದಿರದಲ್ಲಿ ಜರುಗಿದ ‘ಚೋರ ಚರಣದಾಸ’ 29೦ನೇ ಪ್ರಯೋಗದ ಕುರಿತು ಹಿರಿಯರಾದ ಪ್ರೊಜಿ.ಟಿ.ವೀರಪ್ಪನವರು ಪ್ರತಿಕ್ರಿಯಿಸಿದ್ದಾರೆ.
ಹಬೀಬ್ ತನ್ವೀರ್ ರವರ ‘ಚೋರ ಚರಣದಾಸ’ ನಾಟಕವನ್ನ ಮಂಡ್ಯದ ರಮೇಶ್ ರವರು ಮರು ರೂಪ,ವಿನ್ಯಾಸ ನಿರ್ದೇಶನದ ಮೂಲಕ ಪ್ರೇಕ್ಷಕರ ಮನಮುಟ್ಟುವಂತೆ ಮಾಡಿದ್ದಾರೆ
ಪ್ರಸ್ತುತಿ :ನಟನ ಸಂಸ್ಥೆ. ಅಧಿಕಾರ ಸ್ಥಾನದಲ್ಲಿರುವ ಮಂತ್ರಿ ಮಹಾರಾಣಿ, ಖಾವಿ ವೇಷಧಾರಿ ಸನ್ಯಾಸಿ ಹೀಗೆ ಸಾಮಾನ್ಯರ ಬದುಕಿನ ದೌರ್ಬಲ್ಯಗಳ ವಾಸ್ತವತೆಯನ್ನು ಹಾಸ್ಯಮಯವಾಗಿ ಪ್ರದರ್ಶಿಸಿರುವುದು ಪ್ರೇಕ್ಷಕರನ್ನು ನಾಟಕದುದ್ದಕ್ಕೂ ನಗೆಗಡಲಿನಲ್ಲಿ ತೇಲಿಸುತ್ತದೆ.
ಮಂತ್ರಿಯು ಭಂಡಾರವನ್ನು ಕದ್ದು ಕಾವಲುಗಾರನನ್ನು ಮಾತ್ರ ಕಳ್ಳನನ್ನಾಗಿಸುವುದು , ರಾಣಿಯಾದರು ಮಾನಸಿಕ ದೌರ್ಬಲ್ಯದಿಂದ ಕಳ್ಳನನ್ನೇ ಪ್ರೀತಿಸುವುದು ,ಕಾವಿಧಾರಿ ಸ್ವಾಮಿ ಸುಳ್ಳು ಕಳ್ಳತನ ಮಾಡುವುದು, ಕಳ್ಳನಾದರೂ ಕಳ್ಳ ಸತ್ಯ ಹೇಳುವುದು, ಭಿಕ್ಷುಕನಾದರೂ ಶ್ರೀಮಂತನಾಗುವುದು ಕುಡುಕನಾದರೂ ತನ್ನಿಂದಲೇ ಸಮಾಜ ನಡೆಯುತ್ತದೆಂಬ ಸಮಾಜದ ಹಲವು ದೌರ್ಬಲ್ಯಗಳನ್ನು ಹಾಸ್ಯಮಯವಾಗಿ ನಿರ್ದೇಶಿಸಿದ್ದಾರೆ. ಆಯಾ ಪಾತ್ರಗಳು ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡಿವೆ.
ನಾಟಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಮಾಜದ ವಾಸ್ತವ ಚಿತ್ರಣದಲ್ಲಿ ಯಶಸ್ವಿಯಾಗಿದೆ ಇದಕ್ಕೆಲ್ಲ ಪ್ರತಿಭಾವಂತ ಶ್ರೇಷ್ಠ ರಂಗ ನಿರ್ದೇಶಕರಾದ ಮಂಡ್ಯ ರಮೇಶ್ ರವರು ಕಾರಣರಾಗಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ “ -ಪ್ರೊ.ಜಿ.ಟಿ.ವೀರಪ್ಪ
























































ನಾಟಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಮಾಜದ ವಾಸ್ತವ ಚಿತ್ರಣದಲ್ಲಿ ಯಶಸ್ವಿಯಾಗಿದೆ ಇದಕ್ಕೆಲ್ಲ ಪ್ರತಿಭಾವಂತ ಶ್ರೇಷ್ಠ ರಂಗ ನಿರ್ದೇಶಕರಾದ ಮಂಡ್ಯ ರಮೇಶ್ ರವರು ಕಾರಣರಾಗಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ “