ಬೆಂಗಳೂರು: ಎಂ.ಎನ್. ಚಂದ್ರಕೀರ್ತಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿದೆ.
ಕೋಲಾರ ನಗರದ ಸುಬ್ಬಮ್ಮ ಮತ್ತು ಎಂ.ಎಲ್. ನರಸಿಂಹನ್ ನಿವೃತ್ತ ರೆವಿನ್ಯೂ ಇನ್ಸ್‌ಪೆಕ್ಟರ್ ರವರ ಪುತ್ರ ಬೆಂಗಳೂರು ವಿಶ್ವವಿದ್ಯಾಲಯದ “ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್”ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎಂ.ಎನ್. ಚಂದ್ರಕೀರ್ತಿ ಅವರು ಯುವಿಸಿಇ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ.ಎಸ್. ನಾಗರಾಜ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಕ್ಸ್ ಪೆರಿಮೆಂಟಲ್ ಇನ್ವೆಸ್ಟಿಗೇಷನ್ ಆನ್ ಹೈ ವಾಲ್ಯೂಮ್ ಫ್ಲೈ ಆಶ್ ಕಾಂಕ್ರೀಟ್ ಕಂಟೈನಿಂಗ್ ಕ್ಯಾಲ್ಸಿಯಂ ಕಾರ್ಬೋನೇಟ್ ಮೈಕ್ರೋ ಪಾರ್ಟಿಕಲ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.