ಬೆಂಗಳೂರು: ಮುಡಾ ಅಕ್ರಮ ಸೈಟ್ ಹಂಚಿಕೆ ಅಕ್ರಮ ವಿಚಾರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ವಿಸಿದ್ದು, ಆಡಖಿತ ಪ್ರತಿಪಕ್ಷಗಳ ಜಟಾಪಟಿಗೆ ವಿಧಾನಮಂಡಲ ಕಲಾಪ ಬಲಿಯಾಗಿದೆ. ಮೂಡಾ ಹಗರಣ ಕೋಲಾಹಲ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಮೂಡಾ ಹಗರಣ ಬಗ್ಗೆ ವಿಪಕ್ಷಗಳು ಚರ್ಚೆಗೆ ಪಟ್ಟುಹಿಡಿದು ಅಹೋರಾತ್ರಿ ಧರಣಿ ನಡೆಸಿದೆ. ಗುರುವಾರವೂ ಸದನದಲ್ಲಿ ವಿಪಕ್ಷಗಳು ಮುಡಾ ಅಕ್ರಮ ಬಗ್ಗೆ ಸಿಬಿಐ ತನಿಖೆಗೆ ಪಟ್ಟುಹಿಡಿದು ಬಿಜೆಪಿ-ಜೆಡಿಎಸ್ ಶಾಸಕರು ಗದ್ದಲ ಎಬ್ಬಿಸಿದ್ದಾರೆ. ಹಗರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಹೋರಾಟ ಮುಂದುವರಿಸಿದರು. ಗದ್ದಲ ಕೋಲಾಹಲದ ನಡುವೆ ಸ್ಪೀಕರ್ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 26ರವರೆಗೆ ಕಲಾಪ ಮುಂದುವರಿಯುತ್ತಿತ್ತು. ಆದರೆ ಒಂದು ದಿನ ಮುನ್ನವೇ ಅಧಿವೇಶನ ಕೊನೆಗೊಂಡಿದೆ. ವಿಧಾನಪರಿಷತ್ ಕಲಾಪವೂ ಅನಿರ್ದಿಷ್ಟಾವಧಿ ಮುಂದೂಡಿದೆ.