ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್‌ನಲ್ಲಿ ತೆರಿಗೆ ಪದ್ದತಿಯ ಬದಲಾವಣೆಯನ್ನು ಪ್ರಕಟಿಸಿದೆ. ಹಣಕಾಸು ಸಚಿವೆ ಅವರು ತಮ್ಮ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆಯನ್ನು ಲೋಕಸಭೆಯಲ್ಲಿ ಪ್ರಕಟಿಸಿದರು. ಹೊಸ ವಿಧಾನದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ತುಸು ಬದಲಾವಣೆ ಮಾಡಲಾಗಿದೆ ಎಂದವರು ಬಜೆಟ್ ಭಾಷಣದಲ್ಲಿ ವಿವರಿಸಿದರು.
- 0-3 ಲಕ್ಷ ರೂ. ಆದಾಯ: ತೆರಿಗೆ ಇಲ್ಲ
- 3 ರಿಂದ 7 ಲಕ್ಷ ರೂ.ವರೆಗಿನ ಆದಾಯ: ಶೇಕಡಾ 5 ರಷ್ಟು ತೆರಿಗೆ
- 7 ರಿಂದ 10 ಲಕ್ಷ ರೂ. ವರೆಗಿನ ಆದಾಯ: ಶೇ 10 ತೆರಿಗೆ
- 10-12 ಲಕ್ಷ ರೂ. ವರೆಗೆ ಆದಾಯ: ಶೇ 15 ತೆರಿಗೆ
- 12-15 ಲಕ್ಷ ರೂ. ವರೆಗೆ ಆದಾಯ: ಶೇ 20 ತೆರಿಗೆ
- 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ: ಶೇ 30 ತೆರಿಗೆ























































