ಬೆಂಗಳೂರು: ಕಾರು ಚಾಲನಾ ತರಬೇತಿ ಸಂದರ್ಭ ಮಹಿಳೆ ಮುಂದೆ ಅಸಬ್ಯವಾಗಿ ನಡೆದುಕೊಂಡ ಡ್ರೈವಿಂಗ್ ಸ್ಕೂಲ್ ತರಬೇರುದಾರನ ವಿರುದ್ದ ನಿಷ್ಟೂರ ಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶಿಸಿದ್ದಾರೆ. ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ರದ್ದು ಪಡಿಸಲು ಆದೇಶಿಸಿರುವ ಸಚಿವರು, ವಿಕೃತಿ ಮೆರೆದ ತರಬೇತುದಾರನ ವಿರುದ್ದವೂ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಎಂಬಾತನ ಕಾರು ಚಾಲನೆ ಕಲಿಯಲು ಬಂದ ಯುವತಿ ಹೊತೆ ಅಸಬ್ಯವಾಗಿ ವರ್ತಿಸಿದ್ದಾನೆಂಬ ಆರೋಪ ಕೇಳಿಬಂದಿದೆ. ಜೂನ್-7 ರಂದು ಬೆಳಗ್ಗೆ 06.00 ಗಂಟೆಗೆ ಬಸವೇಶ್ವರನಗರ ನ್ಯಾಷನಲ್ ಶಾಲೆ ಮೆಲ್ಸೇತುವೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಪಕ್ಷದ ಅಸನದಲ್ಲಿ ಕುಳಿತಿದ್ದ ತರಬೇತುದಾರ ಅಸಭ್ಯ ವರ್ತನೆ ಆರಂಭಿಸಿ, ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜಗರ ಉಂಟು ಮಾಡಿದ್ದಾನೆಂಬ ಬಗ್ಗೆ ದೂರು ಕೇಳಿಬಂದಿದೆ. ಈ ದೂರಿನ ಬಗ್ಗೆ ವರದಿ ತರಿಸಿಕೊಂಡ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ.