ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ಕಾಮಗಾರಿ ಬಗ್ಗೆ ಪರಾಮರರ್ಶೆ ನಡೆಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ನಿಗಮದ ಅಧಿಕಾರಿಗಳ ಜೊತೆ ಹಲವು ಕಾರ್ಯಕ್ರಮಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸಚಿವರು, ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಯೋಜನಾ ಪ್ರದೇಶಗಳಲ್ಲಿನ ಖಾಲಿ ಜಾಗದಲ್ಲಿ ಸಸಿ ನೆಡುವ ಮೂಲಕ ಹಸಿರು ಯೋಜನೆಗೂ ಮುನ್ನುಡಿ ಬರೆದರು.
ಹಲವಾರು ದಶಕಗಳಿಂದ ಕಾಮಗಾರಿಗಳು ಪೂರ್ಣಗೊಳ್ಳದೆ ಇರುವ, ಕಾಮಗಾರಿ ಪೂರ್ಣಗೊಂಡಿದ್ದರೂ ಬಳಕೆಯೇ ಮಾಡದಿರುವ ಹತ್ತು ಹಲವು ಯೋಜನೆಗಳಿಗೆ ಸಾರಿಗೆ ಸಚಿವರು ಕಾಯಕಲ್ಪ ಒದಗಿಸಿದ್ದಾರೆ. ಅದೇ ರೀತಿ ಸದರಿ ಟ್ರಕ್ ಟರ್ಮಿನಲ್ ಗಳಲ್ಲಿ ಸ್ಥಳಾವಕಾಶವಿದ್ದಾಗ್ಯೂ ಸಹ ಹಸಿರು ಬೆಳೆಸುವ ಕಾರ್ಯ ಮಾಡದಿರುವುದನ್ನು ಗಮನಿಸಿ ಸಸಿ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ್ ಅವರಿ ಸಾರಿಗೆ ಸಚಿವರ ಸಲಹೆ, ಸೂಚನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಯಶವಂತಪುರ ಟ್ರಕ್ ಟರ್ಮಿನಲ್, ಕೈಗಾರಿಕಾ ಉಪ-ನಗರ 2 ನೇ ಹಂತ, ಬೆಂಗಳೂರು- 39.00 ಎಕರೆ- ಟರ್ಮಿನಲ್ ಕಾರ್ಯಾಚರಣೆಯಲ್ಲಿದೆ.
ದಾಸನಪುರ ಟ್ರಕ್ ಟರ್ಮಿನಲ್, ಬೆಂಗಳೂರು ಉತ್ತರ, ಬೆಂಗಳೂರು- 13.28 ಎಕರೆ- ಟರ್ಮಿನಲ್ ಮೂಲಭೂತ ಸೌಕರ್ಯ ಕಾಮಗಾರಿ ಮುಗಿದಿದ್ದು ಉದ್ಘಾಟನೆಯಗಬೇಕಿದೆ.
ಮೈಸೂರು ಟ್ರಕ್ ಟರ್ಮಿನಲ್, ಮೈಸೂರು-ನಂಜನಗೂಡು ರಿಂಗ್ ರಸ್ತೆ, ಬಂಡಿಪಾಳ್ಯ-ನಾಚನಹಳ್ಳಿ ರಿಂಗ್ ರಸ್ತೆ ಜಂಕ್ಷನ್, ಮೈಸೂರು – 13.20 ಎಕರೆ- ಟರ್ಮಿನಲ್ ಕಾರ್ಯಾಚರಣೆಯಲ್ಲಿದೆ.
ಹೊಸಪೇಟೆ ಟ್ರಕ್ ಟರ್ಮಿನಲ್, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ- 37.28 ಎಕರೆ- ಟ್ರಕ್ ಟರ್ಮಿನಲ್ ಹಂತ 1 ರ ಮೂಲಭೂತ ಸೌಕರ್ಯ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಉದ್ಘಾಟನೆಯಾಗಬೇಕಿದೆ.
ದಾಂಡೇಲಿ ಟ್ರಕ್ ಟರ್ಮಿನಲ್, ದಾಂಡೇಲಿ ತಾಲೂಕು, ಉತ್ತರ ಕನ್ನಡ- 3.00 ಎಕರೆ- ಪಾರ್ಕಿಂಗ್ ಪ್ರದೇಶದ ಅಭಿವೃಧ್ಧಿ ಕಾಮಗಾರಿ ಮುಗಿದಿದ್ದು ಮತ್ತು ಶೌಚಾಲಯ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು ಉದ್ಘಾಟನೆಯಾಗಬೇಕಿದೆ.
ಧಾರವಾಡ ಟ್ರಕ್ ಟರ್ಮಿನಲ್, ಬೇಲೂರು ಕೈಗಾರಿಕಾ ಪ್ರದೇಶ, ಧಾರವಾಡ- 7.26 ಎಕರೆ- ಟರ್ಮಿನಲ್ ಮೂಲಭೂತ ಸೌಕರ್ಯ ಕಾಮಗಾರಿ ಮುಗಿದಿದೆ ಆದರೆ ಹಲವಾರು ವರ್ಷದಿಂದ ಟರ್ಮಿನಲ್ ಬಳಕೆಯಲ್ಲಿರಲಿಲ್ಲ ಅದನ್ನು ಸಹ ಬಳಸಲಾಗುವುದು.
ಅಂಚಟಗೇರಿ ಗ್ರಾಮ, ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ- 56.13 ಎಕರೆ- ಈ ಪ್ರದೇಶದ 43 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದು ತಳಪಾಯ ಹಾಗೂ ವಿಸ್ತೀರ್ಣ ಗುರುತಿಸುವ ಕಾಮಗಾರಿ ಮುಗಿದಿದೆ. ಹುಬ್ಬಳ್ಳಿ ಕಾರವಾರ ಹೆದ್ದಾರಿಯಿಂದ ಟರ್ಮಿನಲ್ ಪ್ರದೇಶಕ್ಕೆ ಮೆಟಲಿಂಗ್ ಮಾರ್ಗ ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ ಹಾಗೂ 10 ಎಕರೆ ಜಾಗವನ್ನು ಟ್ರಕ್ಕುಗಳ ನಿಲುಗಡೆಗೆ ಸಿದ್ದಗೊಳಿಸಲಾಗಿದೆ.
ಚಿಕ್ಕತುಪ್ಪೂರು ಗ್ರಾಮ, ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆ- 15.00 ಎಕರೆ- ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ತಳಪಾಯ ಹಾಗೂ ವಿಸ್ತೀರ್ಣ ಗುರುತಿಸುವ ಕಾಮಗಾರಿ ಮುಗಿದಿದೆ.
ಯೆರಾಮರಸ್, ರಾಯಚೂರು ಜಿಲ್ಲೆ- 15.00 ಎಕರೆ- ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.
ಡಿಡಿ ದೇವರಾಜ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನ ಸಸಿ ನೆಡುವ ಕಾರ್ಯಕ್ರಮದ ವಿವರ:
ದಾಸನಪುರ ಟ್ರಕ್ ಟರ್ಮಿನಲ್ ಬೆಂಗಳೂರು ಗ್ರಾಮಾಂತರ: ಫೆಡರಲ್ ಮುಘಲ್ ಮೂಲಕ 600 ಮರದ ಸಸಿಗಳು.
ಯಶವಂತಪುರ ಟ್ರಕ್ ಟರ್ಮಿನಲ್, ಬೆಂಗಳೂರು ಐಒಸಿ ಡೀಲರ್ ಮೂಲಕ 400 ಮರದ ಸಸಿಗಳು. (ಪ್ರಗತಿಯಲ್ಲಿದೆ, ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳಲಿದೆ)
ಮೈಸೂರು ಟ್ರಕ್ ಟರ್ಮಿನಲ್: ಟರ್ಬೋ ಸ್ಟೀಲ್ ಮೂಲಕ 520 ಮರದ ಸಸಿಗಳು.
ಹೊಸಪೇಟೆ ಟ್ರಕ್ ಟರ್ಮಿನಲ್, ವಿಜಯನಗರ ಜಿಲ್ಲೆ: ಟರ್ಬೋ ಸ್ಟೀಲ್ ಮೂಲಕ 1200 ಮರದ ಸಸಿಗಳು. (ಪ್ರಗತಿಯಲ್ಲಿದೆ)
ಅಂಚಟಗೇರಿ ಟ್ರಕ್ ಟರ್ಮಿನಲ್, ಹುಬ್ಬಳ್ಳಿ: 3000 ಮರದ ಸಸಿಗಳು.(ಪ್ರಗತಿಯಲ್ಲಿದ್ದು ಮಳೆಗಾಲದ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ)