ನವದೆಹಲಿ: ಭಾರತದಲ್ಲಿ ಐಪಿಸಿ, ಸಿಆರ್‌ಪಿಸಿ ಸಹಿತ ಗತಕಾಲದ ಕಾನೂನುಗಳು ನೇಪತ್ಯಕ್ಕೆ ಸರಿದಿದೆ. ಇದೀಗ ಹೊಸ ಕಾನೂನು ಯಶಸ್ವಿಯಾಗಿ ಜಾರಿಗೆ ಬಂದಿದೆ. ಬ್ರಿಟೀಷರ ಪಳೆಯುಳಿಕೆಗಳೆಂದೇ ಗುರುತಾಗಿದ್ದ ಇಂಡಿಯನ್ ಪೀನಲ್ ಕೋಡ್ (ಐಪಿಸಿ), ಕ್ರಿಮಿನಲ್ ಪೀನಲ್ ಕೋಡ್ (ಸಿಆರ್‌ಪಿಸಿ) ಸಹಿತ ಪ್ರಮುಖ ಕಾನೂನುಗಳನ್ನು ಮೋದಿ ಸರ್ಕಾರ ಇತಿಹಾಸದ ಪುಟಕ್ಕೆ ಸೇರಿದ್ದು, ಸೋಮವಾರದಿಂದ (ಜುಲೈ 1, 2024) ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಎಂಬ ಹೆಸರಿನಲ್ಲಿ ಹೊಸ ಕಾನೂನು ವ್ಯವಸ್ಥೆ ಜಾರಿಗೆ ಬಂದಿದೆ.
ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಪಾಸ್ ಮಾಡಿದ್ದ ವಿದೇಯಕಗಳು ಇದೀಗ ಕಾನೂನು ರೂಪದಲ್ಲಿ ಜಾರಿಗೆ ಬಂದಿದ್ದು, ದೇಶದ ಪ್ರಜ್ಞಾವಂತ ನಾಗರಿಕರು ಹೊಸ ಕಾನೂನನ್ನು ಸ್ವಾಗತಿಸಿದ್ದಾರೆ.
ಹೊಸ ಕಾನೂನಿನಂತೆ ಚಾರ್ಜ್ ಶೀಟ್ ಸಲ್ಲಿಕೆ ಅವಧಿ 60 ದಿನಗಳಿಗೆ ಇಳಿಕೆ, ತೀರ್ಪು ನೀಡುವ ಅವಧಿ 45 ದಿನಗಳಿಗೆ ಇಳಿಕೆಯಾಗಲಿದ್ದು, ಇದರಿಂದ ತ್ವರಿತ ನ್ಯಾಯನೀಡಿಕೆ ಸಾಧ್ಯವಾಗಲಿದೆ ಎಂದು ಕಾನೂನು ತಜ್ಞರೂ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆರೋಪಿಗಳ ಬಿಡುಗಡೆ, ಪೋಕ್ಸೋ ಸಂಬಂಧಿತ ವರದಿ ಸಲ್ಲಿಕೆ, ಎಲೆಕ್ಟ್ರಾನಿಕ್ ಉಪಕರಣ ಮೂಲಕ ಸಮನ್ಸ್ ತಲುಪಿಸುವುದು ಸೇರಿದಂತೆ ಹಲವು ಮಹತ್ವದ ಬದಲಾವಣೆಯಾಗಿದ್ದು, 46ಕ್ಕೂ ಅಧಿಕ ಸೆಕ್ಷನ್‌ಗಳು ಇದೀಗ ಬದಲಾಗಿವೆ. ಮಹಿಳೆಯರನ್ನು, 60 ವರ್ಷ ಮೇಲ್ಪಟ್ಟ,15 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಪೊಲೀಸರು ಠಾಣೆಗೆ ಕರೆಸುವಂತಿಲ್ಲ ಇತ್ಯಾದಿ ಕ್ರಮಗಳು ಸುಧಾರಣೆಗೆ ಮುನ್ನುಡಿಯಾಗಿದೆ ಎಂದು ಕಾನೂನು ಪಂಡಿತರು ಬಣ್ಣಿಸಿದ್ದಾರೆ.
BNS, BNSS, BSA ಕಾಯ್ದೆಗಳ ಬಗ್ಗೆ ಸಾರ್ವಜನಿರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಲವರು ಬ್ರಿಟೀಷರ ಕಾಲದ ಕಾನೂನನ್ನು ತೆಗೆದುಹಾಕಿ ನಮ್ಮದೇ ಆದ ಕಾನೂನನ್ನು ರೂಪಿಸಲಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಜಾರಿಗೆ ಬಂದಿದ್ದು, ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸಿ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಹೊಸ ಯುಗವನ್ನು ಗುರುತಿಸುತ್ತದೆ ಎಂಬ ವ್ಯಾಖ್ಯಾನ ಗಮನಸೆಳೆದಿದೆ.
ನೂತನ ಭಾರತೀಯ ನ್ಯಾಯ ಸಂಹಿತೆಯು ಸಂತ್ರಸ್ತರ ಹಕ್ಕುಗಳು ಮತ್ತು ಅಗತ್ಯಗಳಿಗೆ ಆದ್ಯತೆ ನೀಡುತ್ತದೆ, ಮಹಿಳೆಯರು, ಮಕ್ಕಳು ಮತ್ತು ದುರ್ಬಲ ಸಮೂಹ ಮೇಲಿನ ಅಪರಾಧಗಳ ಮೇಲೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಜಾರಿಗೊಳಿಸುತ್ತದೆ. ತ್ವರಿತ ನ್ಯಾಯ ಮತ್ತು ಬಲವಾದ ರಕ್ಷಣೆ ಸಾಧ್ಯವಿದೆ ಎಂಬ ಪ್ರತಿಪಾದನೆ ವ್ಯಕ್ತವಾಗಿದೆ.
Bharatiya Nyaya Sanhita 2023
This law prioritizes victims’ rights and needs, enforcing a zero-tolerance policy on crimes against women, children, and vulnerable groups. Faster justice and stronger protections ! #IndianLaws #LegalReforms #WomenSafety pic.twitter.com/ODiSoQdrET
— Inconvenient Truths (@t_inconvenient) July 1, 2024
ಹೊಸ ಕಾಯ್ದೆಯು ಅನ್ಯಾಯಕ್ಕೊಳಗಾದವರಿಗೆ ನೆರವು, ರಕ್ಷಣೆ, ಪರಿಹಾರ ಮತ್ತು ಪುನರ್ವಸತಿಗಾಗಿ ಮಾರ್ಗ ಸುಗಮಗೊಳಿಸುತ್ತದೆ ಎಂಬ ಶ್ಲಾಘನೀಯ ಬರಹಗಳೂ ಕಂಡುಬಂದಿವೆ.
Bharatiya Nagarik Suraksha Sanhita 2023
Strengthens mechanisms for victim assistance, protection, compensation, and rehabilitation. One-stop crisis centres, protection officers, counsellors, and shelters ensure comprehensive support. #IndianLaws #LegalReforms #ChildProtection pic.twitter.com/R9XKA1yno7
— Inconvenient Truths (@t_inconvenient) July 1, 2024
ಅಪರಾಧ ಕೃತ್ಯಗಳ ಮೂಲವೇ ಭ್ರಷ್ಟಾಚಾರ.. ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುವ ಕಾನೂನು ಜಾರಿಯಾಗಬೇಕು; ಕೆ.ಎ.ಪಾಲ್
ದೇಶಗಳಲ್ಲಿ ನತನವಾಗಿ ಜಾರಿಗೆ ಬಂದಿರುವ BNS, BNSS, BAS ಬಗ್ಗೆ ಸಾಮಾಜಿಕ ಜಾಗೃತಿ ವಿಚಾರಗಳಲ್ಲಿ ಮುಂಚೂಣಿಯಲ್ಲಿರುವ, ಸಾಮಾಜಿಕ ಹೋರಾಟಗಾರರೂ ಆಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥರಾದ ಕೆ.ಎ.ಪಾಲ್ ಅವರು, ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಬ್ರಿಟೀಷರ ಕಾಲದ ಕಾಯ್ದೆಗಳಲ್ಲಿ ಬದಲಾವಣೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿ. ಆದರೆ ಇದು ಕೇವಲ ಸೆಕ್ಷನ್‌ಗಳ ಸ್ಥಾನ ಪಲ್ಲಟಕ್ಜೆ ಸೀಮಿತವಾಗಿರಬಾರದು, ಇನ್ನಷ್ಟು ಬದಲಾವಣೆಯಾಗಬೇಕಿದೆ ಎಂದಿದ್ದಾರೆ.
ಈ ಸಂಹಿತೆಗಳನ್ನು ಮತ್ತಷ್ಟು ಪರಿವರ್ತನೆ ಮಾಡಲು ಇನ್ನೂ ಸಾಕಷ್ಟು ಅವಕಾಶಗಳಿವೆ. ಈಗಾಗಾಲೇ ಹಲವಾರು ಬಾರಿ ಬದಲಾವಣೆ ತರಲಾಗಿತ್ತು. ಈ ಬಾರಿಯಂತೂ ಪರಿಪೂರ್ಣ ಬದಲಾವಣೆ ನಿರೀಕ್ಷಿಸಿದ್ದೆವು. ಜನರ ನಿರೀಕ್ಷೆ ತಲುಪಲು ಕಾಲಾವಕಾಶ ಬೇಕಾಗಬಹುದು ಎಂದು ಕೆ.ಎ.ಪಾಲ್ ಪ್ರತಿಪಾದಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳ, ಸಾಮಾಜಿಕ ನ್ಯಾಯದ ಪರವಾಗಿ ”ಸಿಟಿಜನ್ ರೈಟ್ಸ್ ಫೌಂಡೇಷನ್’ ಮೂಲಕ ಹಲವಾರು ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡುವ ಮೂಲಕ ಗಮನಸೆಳೆದಿರುವ ಕೆ.ಎ.ಪಾಲ್ ಅವರು ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆಯನ್ನೂ ನೀಡಿದ್ದಾರೆ. ಪ್ರಸಕ್ತ ವ್ಯವಸ್ಥೆಯಲ್ಲಿನ ಅಪರಾಧ ಪ್ರಕರಣಗಳಿಗೆ ಭ್ರಷ್ಟಾಚಾರವೇ ಮೂಲವಾಗಿರುವುದರಿಂದ ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ರೀತಿ ಕಾಯ್ದೆಯಲ್ಲಿ ಮಾರ್ಪಾಡು ಆಗಬೇಕಿದೆ ಎಂದಿದ್ದಾರೆ. ಇದಕ್ಕೆ ಸಮಯಾವಕಾಶ ಬೇಕಾಗಬಹುದು. ಆದರೂ ಈ ಸರ್ಕಾರ ಅದನ್ನು ಮಾಡಿ ತೋರಿಸಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.