ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ‘ಹಿಂದೂ’ ವಿಚಾರ ಕುರಿತಂತೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ, ಬಿಜೆಪಿ, ಆರೆಸ್ಸೆಸ್ ಬಗ್ಗೆ ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕರಾಗಿ ತಮ್ಮ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, :ತಮ್ಮನ್ನು ತಾವು ಹಿಂದೂಗಳು ಎಂದು ಹೇಳಿಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ’ ಎಂದು ಕುಟುಕಿದರು.
The extent of animosity that Rahul Gandhi has for Hindus is unbelievable.
In his maiden speech as Leader of Opposition in Lok Sabha, he has insulted all Hindus by calling them practitioners of violence.
Shameful.#HinduVirodhiRahulGandhi pic.twitter.com/eyMdf50DeT
— Tejasvi Surya (@Tejasvi_Surya) July 1, 2024
ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಸಹಿತ ಎನ್ಡಿಎ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪಿಎಂ ಮೋದಿ, ರಾಹುಲ್ ಗಾಂಧಿ ಹಿಂದೂ ಸಮಾಜವನ್ನೇ ಹಿಂಸಾಚಾರಿಗಳು ಎಂದು ಕರೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಈ ಆರೋಪವನ್ನು ಅಲ್ಲಗಳೆದ ರಾಹುಲ್, ನಾನು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು ಇಡೀ ಹಿಂದೂ ಸಮಾಜದ ಬಗ್ಗೆಯಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ, ಆರ್ಎಸ್ಎಸ್ ಅಥವಾ ಮೋದಿ ಇಡೀ ಹಿಂದೂ ಸಮಾಜವಲ್ಲ ಎಂದು ರಾಹುಲ್ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಡಿದರು.
#WATCH | After LoP Lok Sabha Rahul Gandhi attacks him, PM Modi responds by saying, “Calling the entire Hindu community violent is a very serious matter.” pic.twitter.com/HrpCvLg3hF
— ANI (@ANI) July 1, 2024
ಸತ್ಯದ ಜೊತೆಗೆ ನಿಲ್ಲಬೇಕು ಮತ್ತು ಅಹಿಂಸೆಯನ್ನು ಅನುಸರಿಸಬೇಕೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ ಎಂದು ವ್ಯಾಖ್ಯಾನಿಸಿದ ಅವರು. ನರೇಂದ್ರ ಮೋದಿ ಎಂದರೆ ಇಡೀ ಹಿಂದೂ ಸಮುದಾಯವಲ್ಲ. ಬಿಜೆಪಿ, ಆರ್ಎಸ್ಎಸ್ ಎಂದರೆ ಹಿಂದೂ ಸಮುದಾಯದ ಪ್ರತಿತಿನಿಧಿ ಅಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದ ಮಾತು ಬಿಜೆಪಿ ಸಂಸದರನ್ನು ಕೆರಳುವಂತೆ ಮಾಡಿತು.