ಬೆಂಗಳೂರು: ರಾಜಧಾನಿ ಬೆಂಗಳೂರಿನ ಉದ್ಯಾನ ನಗರಿ ಎಂದು ಖ್ಯಾತಿಗೊಳಗಾದರೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾರ್ಕುಗಳು ಅವ್ಯವಸ್ಥೆಯ ಆಗರವಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಮೀಪದ ಪಾರ್ಕ್ ಸ್ಥಿತಿ ಇದೀಗ ಭಾರೀ ಸುದ್ದಿಯಾಗುತ್ತಿದ್ದು ಆಯುಕ್ತರ ನೇತೃತ್ವದ ಸ್ಥಳೀಯ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆಯೇ ಅನುಮಾನ ಮೂಡುವಂತಿದೆ. ಮಹಾನಗರ ಪಾಲಿಕೆಯ ಕೇಂದ್ರ ಸ್ಥಾನ ಸಮೀಪವೇ ‘ಮಹಾ ನರಕ’ದ ದರ್ಶನವಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿಗೆ ನೀಡಿರುವ ದೂರು ಸಂಚಲನ ಸೃಷ್ಟಿಸಿದೆ.
ಇದು ಬೆಂಗಳೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ‘ಸಿಲ್ವರ್ ಜ್ಯುಬಿಲಿ ಪಾರ್ಕ್’ನ ಅವ್ಯವಸ್ಥೆಯ ಚಿತ್ರಣ. ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಮೀಪವೇ ಕಂಡು ಬರುತ್ತಿರುವ ‘ಮಹಾ ನರಕ ದರ್ಶನ’.. ಇದು ಉದ್ಯಾನವೋ ಅಥವಾ ಮೂತ್ರಾಲಯ ಸ್ಥಳವೋ ಎಂಬುದು ಸಾರ್ವಜನಿಕರ ಪ್ರಶ್ನೆ.. ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮಾರ್ಷಲ್’ಗಳು ಎಲ್ಲಿದ್ದಾರೆ? ಎಂಬುದನ್ನು ಆಯುಕ್ತರೇ ಪತ್ತೆ ಮಾಡಬೇಕಿದೆ ಎಂದೆನ್ನುತ್ತಿದ್ದಾರೆ ಪ್ರಜ್ಞಾವಂತ ಜನ..!
ಈ ನರಕ ದರ್ಶನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಹಾಗೂ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಯು.ಕೆ.ಇರ್ಫಾನ್ ಖಾನ್ ಅವರು, ಜೂನ್ 26ರಂದು ದೂರು ಸಲ್ಲಿಸಿ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ‘ಸಿಲ್ವರ್ ಜ್ಯುಬಿಲಿ ಪಾರ್ಕ್’ ಅವ್ಯವಸ್ಥೆಯನ್ನು ಸರಿಪಡಿಸಿ, ಉದ್ಯಾನವನಕ್ಕೆ ಕಾಯಕಲ್ಪ ನೀಡಬೇಕೆಂದು ಮನವಿ ಮನವಿ ಮಾಡಿದ್ದಾರೆ.
ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಅಂದರೆ ಚಿಕ್ಕಪೇಟೆ ವಿಧಾನ ಸಭಾ ಪ್ರದೇಶದ ಹಾಗೂ ಬಿಬಿಎಂಪಿಯ ಸಿಲ್ವರ್ ಜ್ಯುಬಿಲಿ ವಾರ್ಡ್ ನಲ್ಲಿ ಐತಿಹಾಸಿಕ ‘ ಸಿಲ್ವರ್ ಜ್ಯುಬಿಲಿ ಪಾರ್ಕ್’ ಇದೆ. ಕೆ.ಆರ್.ಮಾರ್ಕೆಟ್, ಎಸ್.ಜೆ.ಪಾರ್ಕ್, ಎಸ್.ಪಿ.ರೋಡ್, ಕುಂಬಾರಪೇಟೆ, ಟೌನ್ ಹಾಲ್ ಪ್ರದೇಶಕ್ಕೆ ಈ ಪಾರ್ಕ್ ಒಂದು ಶ್ವಾಸಕೋಶ ಇದ್ದಂತಿದೆ. ಆದರೆ ಕೆಲವು ವರ್ಷಗಳಿಂದ ಈ ಪಾರ್ಕ್ ದುರಸ್ತಿ ಕಂಡಿಲ್ಲ. ಕನಿಷ್ಠ ನಿರ್ವಹಣೆಯೂ ಇಲ್ಲದೆ ದುರ್ನಾತ ಬೀರುವ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ಸರ್ಕಾರದ ಗಮನಸೆಳೆದಿದ್ದಾರೆ.
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಮೀಪವೇ ಈ ಪಾರ್ಕ್ ಇದ್ದರೂ ಅಧಿಕಾರಿಗಳ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ ಕೇಂದ್ರಗಳ ಮದ್ಯೆ ಇರುವ ‘ಸಿಲ್ವರ್ ಜುಬಿಲೀ ಪಾರ್ಕ್’ ಇಡೀ ಪ್ರದೇಶದ ಜನರ ಪಾಲಿಗೆ ವರದಾನವಾಗಿರಬೇಕಿತ್ತು. ಆದರೆ, ಕಿಡಿಗೇಡಿಗಳು ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಹಾಗೂ ಮಲ ಮೂತ್ರ ವಿಸರ್ಜನೆಯಿಂದಾಗಿ ಜನರು ಪಾರ್ಕಿನತ್ತ ಸುಳಿಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಜೊತೆಗೆ ಕಿಡಿಗೇಡಿಗಳು ಪಾರ್ಕಿನ ಗಿಡ ಮರಗಳನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಾಗಲೀ, ಮಾರ್ಷಲ್’ಗಳಾಗಲೀ ಗಮನಕೊಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದಲ್ಲಿ ಸರ್ಕಾರಿ ಸೊತ್ತಾಗಿರುವ ಈ ಪಾರ್ಕ್ ನಿಗೂಢ ಮಾಫಿಯಾ ಕೈಗೆ ಹೋಗಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆತಂಕವನ್ನೂ ಯು.ಕೆ.ಇರ್ಫಾನ್ ಖಾನ್ ಅವರು ಸಿಎಂ-ಡಿಸಿಎಂಗೆ ನೀಡಿರುವ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಕಚೇರಿಗಳ ಅವಧಿ