ಹೈದರಾಬಾದ್: ಇತ್ತೀಚಿನ ದಿನಗಳಲ್ಲಿಎಲ್ಲಾ ಕಡೆ ಬೀದಿ ನಾಯಿಗಳ ಹಾವಳಿ ಸಾಮಾನ್ಯವಾಗಿ ಬಿಟ್ಟಿದೆ. ಶ್ವಾನಗಳ ದಾಳಿಗೆ ಮಹಿಳೆಯರು-ಮಕ್ಕಳು-ವೃದ್ದರು ತುತ್ತಾಗಿರುವ ನೂರಾರು ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ, ಹೈದರಾಬಾದ್ನಲ್ಲಿ ಮಹಿಳೆಯೊಬ್ಬರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿರುವ ಘಟನೆ ಬೆಚ್ಚಿ ಬೀಳಿಸುವಂತಿದೆ.
#WATCH | Hyderabad, Telangana: A woman named Rajeshwari was attacked by 15-20 dogs on the morning of June 21. The victim sustained minor injuries.
(CCTV Source: Victim) pic.twitter.com/053STRsLPS
— ANI (@ANI) June 23, 2024
ಏಕಕಾಲದಲ್ಲಿ 15ಕ್ಕೂ ಹೆಚ್ಚು ಬೀದಿ ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿದೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಮಹಿಳೆ ಹರಸಾಹಸ ನಡೆಸಿದ್ದಾರೆ. ಆದರೂ ಬಿಡದ ಶ್ವಾನಗಳು ಈ ಮಹಿಳೆಯನ್ನು ನೆಲಕ್ಕೆ ಬೀಳಿಸಿ ಕಚ್ಚಿ ಹಾಕಿದೆ.
ಜೂನ್ 21 ರಂದು ನಡೆದ ಶ್ವಾನ ದಾಳಿಯ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವೀಡಿಯೋ ಇದೀಗ ವೈರಲ್ ಆಗಿದೆ. ಲಭ್ಯವಾಗಿದ್ದು ಬೆಚ್ಚಿ ಬೀಳಿಸುವಂತಿದೆ.