ಬಹುನಿರೀಕ್ಷೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಮುನ್ನವೇ ಹವಾ ಎಬ್ಬಿಸಿದೆ. ಪ್ರಭಾಸ್ ನಟನೆಯ ಈ ಸಿನಿಮಾದಲ್ಲಿ ಭಾರತದ ಹಲವು ದಿಗ್ಗಜರು ನಟಿಸಿರುವುದರಿಂದ ಬಾಲಿವುಡ್ ಸಹಿತ ಎಲ್ಲಡೆ ಕುತೂಹಲ ಇದೆ.
ದುಬಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಮುನ್ನವೇ ಭಾರಿ ಗಳಿಕೆ ಮಾಡಿದೆಯಂತೆ. ಮೂಲಗಳ ಪ್ರಕಾರ ಸಿನಿಮಾ ನಿರ್ಮಾಣ ವೆಚ್ಚದ ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಈಗಾಗಲೇ ಗಳಿಸಿದೆಯಂತೆ. ಬಿಡುಗಡೆಗೆ ಮುನ್ನವೇ 400 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿರುವ ‘ಕಲ್ಕಿ 2898 ಎಡಿ’ ಚಿತ್ರವು ಬಿಡುಗಡೆ ನಂತರ ಸಿನೆಮಾ ಕ್ಷೇತ್ರದ ಎಲ್ಲಾ ದಾಖಲೆಗಳನ್ನು ಮೀರಲಿದೆ ಎಂದು ಸಿನಿ ತಂಡ ವಿಶ್ವಾಸ ಹೊಂದಿದೆ.



















































