ಬೆಂಗಳೂರು: ಕರ್ನಾಟಕದಲ್ಲೂ ಸೆಮಿಕಂಡಕ್ಟರ್ ಕಂಪೆನಿಗಳಿಗೆ ಗುಜರಾತ್ ಮಾದರಿಯಲ್ಲೇ ಪ್ರೋತ್ಸಾಹ ಧನ ನೀಡುವಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಅಮೆರಿಕ ಮೂಲದ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪೆನಿಗೆ ಕೇಂದ್ರ ಸರ್ಕಾರದಿಂದ ಶೇ. 50, ಗುಜರಾತ್ ಸರ್ಕಾರದಿಂದ ಶೇ. 20 ಪ್ರೋತ್ಸಾಹ ಧನ ನೀಡುತ್ತಿದ್ದು, ಕಂಪೆನಿ ಶೇ. 30ರಷ್ಟು ಮಾತ್ರ ಹೂಡಿಕೆ ಮಾಡಲಿದೆ. ನಮ್ಮ ರಾಜ್ಯದವರೇ ಆದ ಶ್ರೀ ಕುಮಾರ ಸ್ವಾಮಿಯವರು ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದು, ಅವರನ್ನು… pic.twitter.com/hgXGa9a3GF
— M B Patil (@MBPatil) June 18, 2024
ಅಮೆರಿಕ ಮೂಲದ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪೆನಿಗೆ ಕೇಂದ್ರ ಸರ್ಕಾರದಿಂದ ಶೇ. 50, ಗುಜರಾತ್ ಸರ್ಕಾರದಿಂದ ಶೇ. 20 ಪ್ರೋತ್ಸಾಹ ಧನ ನೀಡುತ್ತಿದ್ದು, ಕಂಪೆನಿ ಶೇ. 30ರಷ್ಟು ಮಾತ್ರ ಹೂಡಿಕೆ ಮಾಡಲಿದೆ. ನಮ್ಮ ರಾಜ್ಯದವರೇ ಆದ ಕುಮಾರ ಸ್ವಾಮಿಯವರು ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದು, ಅವರನ್ನು ಭೇಟಿಮಾಡಿ, ನಮ್ಮಲ್ಲಿನ ಸೆಮಿಕಂಡಕ್ಟರ್ ಕಂಪೆನಿಗಳಿಗೂ ಗುಜರಾತ್ ರೀತಿಯಲ್ಲೇ ಉತ್ತೇಜನ ನೀಡುವಂತೆ ಒತ್ತಾಯಿಸಿದ್ದಾರೆ.