ಹೊಸದಿಲ್ಲಿ: ದೇಶದ ರಕ್ಷಣಾ ಕ್ಷೇತ್ರ ಇದೀಗ ಮತ್ತೊಂದು ಯಶೋಗಾಥೆ ಬರೆದಿದೆ. ಪ್ರತಿಷ್ಠಿತ ಡಿಆರ್ಡಿಒ ಸಂಸ್ಥೆ ಮಹತ್ವಾಕಾಂಕ್ಷೆಯ “ರುದ್ರ ಎಂ-ಐಐ’ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.

ಭಾರತೀಯ ವಾಯುಪಡೆಗೆ ಬಲ ಹೆಚ್ಚುವ ಉದ್ದೇಶದಿಂದ ಸಿದ್ದಪಡಿಸಲಾದ ಎಸ್ಯು-30 ಯುದ್ಧ ವಿಮಾನ ಮೂಲಕ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಒಡಿಶಾ ಕರಾವಳಿಯಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ರೀತಿಯ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಿಯವಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನ ಬಳಸಲಾಗಿದ್ದು, ಈ ಕ್ಷಿಪಣಿ ಪರೀಕ್ಷೆ ಯಶಸ್ಸುಗೊಳಿಸಿದ ವಿಜ್ಞಾನಿಗಳನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಭಿನಂಧಿಸಿದ್ದಾರೆ.


























































