ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿರುವ ‘ನಮ್ಮ ಕ್ಲಿನಿಕ್’ ವ್ಯವಸ್ಥೆಯನ್ನು ಸಿದ್ದರಾಮಯ್ಯ ಸರ್ಕಾರ ಸಮಾಧಿ ಮಾಡಲು ಹೊರಟಿದೆಯೇ? ಇಂಥದ್ದೊಂದು ಪ್ರಶ್ನೆಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಮುಂದಿಟ್ಟಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನ ಬಹುತೇಕ ‘ನಮ್ಮ ಕ್ಲಿನಿಕ್’ಗಳಲ್ಲಿ ವೈದ್ಯರೇ ಇಲ್ಲ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಮುಖ್ಯಸ್ಥರಿಗಾಗಲೀ, ಪಾಲಿಕೆ ಆಯುಕ್ತರಿಗಾಗಲೀ ಕಾಳಜಿಯೇ ಇಲ್ಲವೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸಿದೆ.
ಬಹುತೇಕ ‘ನಮ್ಮ ಕ್ಲಿನಿಕ್’ಗಳಲ್ಲಿ ವೈದ್ಯರ ಹಾಜರಾತಿ ಕಾಣುತ್ತಿಲ್ಲ. ಕ್ಲಿನಿಕ್ ಸಿಬ್ಬಂದಿಯೇ ರೋಗಿಗಳನ್ನು ಪರಿಶೀಲಿಸಿ ಔಷಧಿ ನೀಡಿತ್ತಿದ್ದಾರೆ. ಇದು ನಿಯಮಾವಳಿಗಳಿಗೆ ವಿರುದ್ಧವಾಗಿವೆ. ಈ ಬಗ್ಗೆ ಬಿಬಿಎಂಪಿ ಕಂಟ್ರೋಲ್ ರೂಮ್’ಗೆ ಕರೆ ಮಾಡಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಉನ್ನತ ಅಧಿಕಾರಿಗಳೂ ಕ್ಯಾರೇ ಅನ್ನುತ್ತಿಲ್ಲ ಎಂದು ನಾಗರಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಈ ನಡುವೆ, ಮಾಜಿ ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಕಿರುವ ಪೋಸ್ಟ್ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ‘ನಗರ ಪ್ರದೇಶದ ನಿವಾಸಿಗಳಿಗೆ, ಅದರಲ್ಲೂ ಕೆಳಮಧ್ಯಮ ವರ್ಗ ಮತ್ತು ಬಡವರಿಗೆ ವರದಾನವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಜನಮನ್ನಣೆಗಳಿಸಿದ್ದ ‘ನಮ್ಮ ಕ್ಲಿನಿಕ್’ ಗಳು ಗ್ಯಾರೆಂಟಿಗಳ ಕುಂಟು ನೆಪಕ್ಕೆ ಮತ್ತೊಂದು ಬಲಿಯಾಗದಿರಲಿ ಎನ್ನುವುದೇ ಆಶಯ’ ಎಂದು ಡಾ.ಸುಧಾಕರ್ ಅವರು ಬರೆದುಕೊಂಡಿದ್ದಾರೆ.
ನಗರ ಪ್ರದೇಶದ ನಿವಾಸಿಗಳಿಗೆ, ಅದರಲ್ಲೂ ಕೆಳಮಧ್ಯಮ ವರ್ಗ ಮತ್ತು ಬಡವರಿಗೆ ವರದಾನವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಜನಮನ್ನಣೆಗಳಿಸಿದ್ದ ‘ನಮ್ಮ ಕ್ಲಿನಿಕ್’ ಗಳು ಗ್ಯಾರೆಂಟಿಗಳ ಕುಂಟು ನೆಪಕ್ಕೆ ಮತ್ತೊಂದು ಬಲಿಯಾಗದಿರಲಿ ಎನ್ನುವುದೇ ಆಶಯ. https://t.co/SR9hZiUACG pic.twitter.com/JC8IMAQA8V
— Dr Sudhakar K (Modi ka Parivar) (@DrSudhakar_) May 27, 2024


























































