ಬೆಂಗಳೂರು: ಕರ್ನಾಟಕದ ಪಾಲಿಗೆ ಈ ಬಾರಿಯ ಮೇ 26ರ ಭಾನುವಾರ ಕರಾಳ ದಿನ. ಹಾಸನ ಬಳಿಯ ಅಪಘಾತದಲ್ಲಿ ಆರು ಮಂದಿ ಬಲಿಯಾಗಿದ್ದಲ್ಲದೆ ರಾಜ್ಯದ ಹಲವೆಡೆ ಅನೇಕ ಅವಘಡಗಳು ಸಂಭವಿಸಿವೆ.
ರಾಜ್ಯದ ವಿವಿಧೆಡೆ ಸಂಭವಿಸಿದ ವಿವಿಧ ಅವಘಡಗಳಲ್ಲಿ ಸುಮಾರು 51 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕಳವಳಕಾರಿ ಸಂಗತಿ ಬಗ್ಗೆ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
6 persons killed in Hassan car accident
In last 24 hrs 51 lives lost in road accidents , one of the highest toll in recent past
Many of these caused due to rash & reckless driving
“#Roadsafety needs responsible behaviour from all the stakeholders” pic.twitter.com/JHYy1vC3CJ
— alok kumar (@alokkumar6994) May 26, 2024
ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿ ಸಾರ್ವಜನಿಕರಲ್ಲಿ ಅಪಘಾತ ಬಗ್ಗೆ ಜಾಗೃತಿ ಕಹಳೆ ಮೊಲಹ್ಗಿಸಿರುವ ಎಡಿಜಿಪಿ ಅಲೋಕ್ ಕುಮಾರ್, ‘ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜೀವಗಳು ಬಲಿಯಾಗಿವೆ. ಇದು ಇತ್ತೀಚಿನ ಹಿಂದಿನ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿವೆ. ಹೆಚ್ಚಿನವು ಅಜಾಗರೂಕ ಮತ್ತು ಅಜಾಗರೂಕ ಚಾಲನೆಯಿಂದ ಸಂಭವಿಸಿವೆ. ಹಾಗಾಗಿ ರಸ್ತೆ ಸುರಕ್ಷತೆಗೆ ಎಲ್ಲಾ ಮಧ್ಯಸ್ಥಗಾರರಿಂದ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆ” ಎಂದು ಅಲೋಕ್ ಕುಮಾರ್ ಪ್ರತಿಪಾದಿಸಿದ್ದಾರೆ.