ಮಾಲಿವುಡ್ ಖ್ಯಾತ ನಟಿ ಮೀರಾ ವಾಸುದೇವನ್ ಮೂರನೇ ಮದುವೆಯಾಗಿದ್ದಾರೆ. ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾಟೋಗ್ರಾಫರ್ ವಿಪಿನ್ ನಯಂಗಮ್ ಅವರನ್ನು ವಿವಾಹವಾಗಿದ್ದು, ತಮ್ಮ ವಿವಾಹದ ಫೊಟೋ, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
. ಮಾಲಿವುಡ್ ಮಾತ್ರವಲ್ಲ ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಸಿನಿ ಲೋಕದಲ್ಲಿ ಮಿಂಚಿರುವ ಮೀರಾ ವಾಸುದೇವನ್ ತಮ್ಮ ಮೂರನೇ ವಿವಾಹ ಮೂಲಕ ಅಭಿಮಾನಿಗಳ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಮೀರಾ ಅವರು ಕಾಲಿವುಡ್ ನಟ ಜಾನ್ ಕೊಕ್ಕನ್ ಅವರೊಂದಿಗೆ ಮೊದಲು ಮದುವೆಯಾಗಿದ್ದರು. ಅವರೊಂದಿಗಿನ ವಿಚ್ಚೇದನ ನಂತರ ವಿಶಾಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದರು. ಅವರಿಂದಲೂ ವಿಚ್ಛೇದನ ಬಳಿಕ ಇದೀಗ ತಮ್ಮ 42ನೇ ವಯಸ್ಸಿನಲ್ಲಿ ಮತ್ತೆ ಹೊಸ ದಾಂಪತ್ಯ ಬದುಕನ್ನು ಆರಂಭಿಸಿದ್ದಾರೆ.
ಜೆರ್ರಿ, ‘ಉನ್ನೈ’, ‘ತನ್ಮಾತ್ರ’ ಸಹಿತ ಅವರು ಅಭಿನಯಿಸಿದ ಹಲವಾರು ಸಿನಿಮಾಗಳು ಹಿಟ್ ಆಗಿವೆ. ಕಿರುತೆರೆಯಲ್ಲಿನ ಮನೋಜ್ಞ ಅಭಿನಯ ಮೂಲಕ ಮೀರಾ ಅವರು ಮನೆಮಾತಾಗಿದ್ದಾರೆ.




















































