ನವದೆಹಲಿ: ಲೋಕಸಭಾ ಚುನಾವಣೆ ಅಂತಿಮ ಹಂತ ತಲುಪಿದ್ದು ಇಂದು ಸೆಮಿ ಫೈನಲ್ ರೀತಿ ಮತಸಮರ ನಡೆದಿದೆ. ಒಟ್ಟು 7 ಹಂತಗಳ ಮತದಾನ ಪೈಕಿ ಇಂದು ಉಪಾಂತ್ಯ ಮತದಾನ.
ಸುಮಾರು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಸಾಗಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದು, 1.52 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ.
6ನೇ ಹಂತದ ಮತದಾನ ನಡೆಯುತ್ತಿರುವ ರಾಜ್ಯಗಳು:
- ಉತ್ತರ ಪ್ರದೇಶ ಮದ 14 ಸ್ಥಾನಗಳು,
- ಹರಿಯಾಣದ 10 ಸ್ಥಾನಗಳು,
- ಬಿಹಾರದ 8 ಸ್ಥಾನಗಳು,
- ಪಶ್ಚಿಮ ಬಂಗಾಳದ 8 ಸ್ಥಾನಗಳು,
- ದೆಹಲಿಯ 7 ಸ್ಥಾನಗಳು,
- ಒಡಿಶಾದ 6 ಸ್ಥಾನಗಳು,
- ಜಾರ್ಖಂಡ್‌ನ 4 ಸ್ಥಾನಗಳು,
- ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ,




















































