ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಯಾರು? ಈ ಬಗ್ಗೆ ವ್ಯಾಪಕ ಚರ್ಚೆ ಸಾಗಿದೆ. ಕೆಲವರು ಅಮಿತ್ ಶಾ ಅವರನ್ನು ಮೋದಿಯ ಉತ್ತರಾಧಿಕಾರಿ ಎಂದು ಪ್ರತಿಪಾದಿಸಿದರೆ, ಇನ್ನೂ ಕೆಲವರು ಯೋಗಿ ಆದಿತ್ಯನಾಥ್ ಅವರೇ ಮೋದಿ ನಂತರದ ನಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು ತಮ್ಮ ಮುಂದಿನ ಪೀಳಿಗೆಗಾಗಿ ಏನನ್ನಾದರೂ ಬಿಟ್ಟು ಹೋಗುತ್ತಾರೆ. ತಮ್ಮ ವಾರಸುದಾರರಿಗೆ ಏನಾದರೂ ನೀಡಲು ಬಯಸುತ್ತಾರೆ.
ದೇಶದ ಜನರೇ ನನ್ನ ಪರಿವಾರ. ಹೀಗಾಗಿ ದೇಶದ ಜನರೇ ನನ್ನ ವಾರಸುದಾರರು.
– ಪ್ರಧಾನಿ ಶ್ರೀ @narendramodi#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ pic.twitter.com/2IOOBWNaCO
— BJP Karnataka (@BJP4Karnataka) May 13, 2024
. ಈ ಚರ್ಚೆಯ ನಡುವೆ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಸ್ವತಃ ಮೋದಿಯವರೇ ಹೇಳಿದ್ದಾರೆ. ದೇಶದ ಜನರೇ ನನ್ನ ಪರಿವಾರ. ಹೀಗಾಗಿ ದೇಶದ ಜನರೇ ನನ್ನ ವಾರಸುದಾರರು ಎಂದು ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ನಡುವೆ ಮಾಡಿರುವ ಭಾಷಣದ ತುಣುಕನ್ನು ಬಿಜೆಪಿ ಹಂಚಿಕೊಂಡಿದೆ.