ಬೆಂಗಳೂರು: ʼಜೋಕಾಲಿ’, ʼರಾಧಾರಮಣʼ ಸೇರಿದಂತೆ ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ್ದ ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಂ ವಿಧಿವಶರಾಗಿದ್ದಾರೆ. ಕರ್ನೂಲು ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ.
35 ವರ್ಷ ಹರೆಯದ ನಟಿ ಪವಿತ್ರಾ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ಆಂದ್ರಪ್ರದೇಶದ ಕರ್ನೂಲು ಸಮೀಪ ಭಾನುವಾರ ಭಾನುವಾರ ಮುಖಾಮುಖಿ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼರಾಧಾರಮಣʼ, ʼಜೋಕಾಲಿʼ, ʼನೀಲಿʼ, ‘ರೋಬೋ ಫ್ಯಾಮಿಲಿʼ ಸಹಿತ ಹಲವಾರು ಕನ್ನಡ ಕಿರುತೆರೆ ಧಾರವಾಹಿಗಳಲ್ಲಿ ಬಟಿಸಿರುವ ಪವಿತ್ರಾ ಜಯರಾಂ ಅವರು, ತೆಲುಗಿನ ʼತ್ರಿನಯನಿʼ ಧಾರವಾಹಿ ಮೂಲಕ ಹೊರ ರಾಜ್ಯಗಳಲ್ಲೂ ಜನಪ್ರಿಯತೆ ಗಳಿಸಿದ್ದಾರೆ.