ಬೆಂಗಳೂರು: ಲೋಕಸಭಾ ಚುನಾವಣೆ ಇದೀಗ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿದೆ. ಕರ್ನಾಟಕದ 14 ಜಿಲ್ಲೆಗಳಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ವ್ಯವಸ್ಥೆ ಮಾಡಿದೆ.
ಮತದಾನ ನಡೆಯುವ ಕ್ಷೇತ್ರಗಳು:
- ಚಿಕ್ಕೋಡಿ
- ಬೆಳಗಾವಿ
- ಬಾಗಲಕೋಟೆ,
- ವಿಜಯಪುರ,,
- ಕಲಬುರಗಿ,
- ರಾಯಚೂರು,
- ಬೀದರ್,
- ಕೊಪ್ಪಳ,
- ಬಳ್ಳಾರಿ,
- ಹಾವೇರಿ,
- ಧಾರವಾಡ,
- ಉತ್ತರ ಕನ್ನಡ,
- ದಾವಣಗೆರೆ,
- ಶಿವಮೊಗ್ಗ.
























































