ತೈಪೆ: ತೈವಾನ್ನಲ್ಲಿ ಸರಣಿ ಭೂಕಂಪ ಸಂಭವಿಸಿದ್ದು ಜನ ಭೀತಿಗೊಳಗಾಗಿದ್ದಾರೆ. ಪ್ರಬಲ ಭೂಕಂಪ ಸಂಭವಿಸಿದೆಯಾದರೂ ಯಾವುದೇ ಜೀವಹಾನಿ ಉಂಟಾಗಿಲ್ಲ.
ಪೂರ್ವ ಕೌಂಟಿ ಹುವಾಲಿಯನ್ ಸೇರಿದಂತೆ ತೈವಾನಿನ ಹಲವೆಡೆ ಭೂಕಂಪ ಸಂಭವಿಸಿದೆ. ಸೋಮವಾರ ರಾತ್ರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಾರಿ ಭೂಮಿಕಂಪಿಸಿದೆ. ಪೂರ್ವ ಹುವಾಲಿಯನ್ನಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ಹಾಗೂ ತೈಪೆಯಲ್ಲಿ 5.5 ರ ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







































































