ನವದೆಹಲಿ: ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿ ಭರವಸೆಗಳ ಮಹಾ ಹೊಳೆಯನ್ನೇ ಹರಿಸಿದೆ. ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ವೃದ್ಧರಿಗೆ ಉಚಿತ ಚಿಕಿತ್ಸೆ, ಬಡವರಿಗೆ ಉಚಿತ ಪಡಿತರ, ರೈತರಿಗೆ ಸಮ್ಮಾನ್ ನಿಧಿ, ಉದ್ಯೋಗಾಂಕ್ಷಿಗಳಿಗಾಗಿ ಮುದ್ರಾ ಯೋಜನೆಯಡಿ 20 ರೂ. ಲಕ್ಷ ಸಾಲ ಸಹಿತ ಭರವಸೆಗಳ ಮಳೆಗೈದಿದ್ದಾರೆ. ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರವಾಗಿದೆ ಎಂದರು. ಇದೇ ವೇಳೆ, ಅವರು ದೇಶದ ಜನರಿಗೆ ಹಲವಾರು ಭರವಸೆಗಳನ್ನು ನೀಡಿ ಗಮನಸೆಳೆದರು.
Watch LIVE: BJP releases Sankalp Patra for Lok Sabha elections 2024. #ModiKiGuarantee https://t.co/8rxAB1SuU4
— BJP (@BJP4India) April 14, 2024
ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳಿವು:
-
70 ವರ್ಷ ಮೇಲ್ಪಟ್ಟವರು ಕೂಡ ಆಯುಷ್ಮಾನ್ ಭಾರತ ಯೋಜನೆಗೆ ಒಳಪಡಲಿದ್ದಾರೆ.
-
70 ವರ್ಷ ಮೇಲ್ಪಟ್ಟವರೂ ಕೂಡ ಇನ್ನುಮುಂದೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ.
-
ಮಂಗಳಮುಖಿಯರಿಗೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ಉಚಿತ ಚಿಕಿತ್ಸೆ
-
ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ.
-
ದೇಶದ 10 ಕೋಟಿ ರೈತರು ಭವಿಷ್ಯದಲ್ಲಿಯೂ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.
-
ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಮೀನುಗಾರರಿಗೆ ಯೋಜನೆ.
-
ದೇಶಾದ್ಯಂತ ಹೈನುಗಾರಿಕೆ ಮತ್ತು ಸಹಕಾರ ಸಂಘಗಳ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು.
-
ಪೈಪ್ ಮೂಲಕ ಗ್ಯಾಸ್ ತಲುಪಿಸುವ ಕೆಲಸ ಮಾಡಲಾಗುವುದು.
-
ಬಿಜೆಪಿ ಸರ್ಕಾರ ಬಡವರಿಗಾಗಿ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಭರವಸೆ.
-
10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ.
-
ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ.
-
ದೇಶಾದ್ಯಂತ ಡೇರಿ ಸಹಕಾರ ಸಂಘಗಳ ಹೆಚ್ಚಳ.
-
ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ.
-
2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ
-
3 ಕೋಟಿ ಲಕ್‌ಪತಿ ದೀದಿ ಮಾಡುವ ಗುರಿ.
-
ಮಹಿಳಾ ಮೀಸಲಾತಿ ಜಾರಿಗೊಳಿಸುವ ಭರವಸೆ.
-
ಒಂದು ರಾಷ್ಟ್ರ, ಒಂದು ಚುನಾವಣೆ,
-
ಮುದ್ರಾ ಯೋಜನೆಯಡಿ ಮೊದಲ ಸಾಲ 10 ಲಕ್ಷ ರೂ. ಇದೀಗ ಬಿಜೆಪಿ ಈ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಳ.
-
ದೇಶದಲ್ಲಿ ಮೂರು ರೀತಿಯ ವಂದೇ ಭಾರತ್ ರೈಲುಗಳು ಓಡಲಿವೆ. ದೇಶದ ಮೂಲೆ ಮೂಲೆಗೆ ವಂದೇ ಭಾರತ್ ರೈಲುಗಳು. ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್, ವಂದೇ ಭಾರತ್ ಮೆಟ್ರೋ.
-
ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು, ಪೂರ್ವ ಭಾರತದಲ್ಲಿ ಒಂದು ಬುಲೆಟ್ ರೈಲು.
-
ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ.
-
ಪ್ರಪಂಚದಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ರಚಿಸುವುದು. ಜಗತ್ತಿನ ಅತ್ಯಂತ ಪುರಾತನ ಭಾಷೆ ತಮಿಳು ನಮ್ಮ ಹೆಮ್ಮೆ. ಜಾಗತಿಕವಾಗಿ ತಮಿಳು ಭಾಷೆಯ ವರ್ಚಸ್ಸು ಹೆಚ್ಚಿಸಲು ಬಿಜೆಪಿ ಪ್ರತಿ ಪ್ರವಾಸ.
-
ಕೋಟ್ಯಂತರ ಕುಟುಂಬಗಳಿಗೆ ಸೋಲಾರ್ ಮೂಲಕ ಉಚಿತವಾಗಿ ವಿದ್ಯುತ್ ಪೂರೈಕೆ
-
ಇ-ಶ್ರಮ್ ಮೂಲಕ ಕಲ್ಯಾಣ ಯೋಜನೆಯ ಪ್ರಯೋಜನ.
-
2025 ಬುಡಕಟ್ಟು ಹೆಮ್ಮೆಯ ವರ್ಷ.
-
ಪ್ರತಿ ಕ್ಷೇತ್ರದಲ್ಲೂ ಒಬಿಸಿ, ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಗೌರವ
-
ಅಯೋಧ್ಯೆಯ ಅಭಿವೃದ್ಧಿ,
-
ಪ್ರಪಂಚದಾದ್ಯಂತ ರಾಮಾಯಣ ಹಬ್ಬ.
-
ಈಶಾನ್ಯ ಭಾರತದ ಅಭಿವೃದ್ಧಿ.