ಬೆಂಗಳೂರು: “ಗುಡ್ ನ್ಯೂಸ್ ಫಾರ್ ಬೆಂಗಳೂರು’ ಎಂದು ಹವಾಮಾನ ಇಲಾಖೆ ಹೇಳಿದೆ. ಸದ್ಯವೇ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿರು ಬೇಸಿಗೆಯ ಬಿಸಿಲ ಧಗೆಯಿಂದ ಬೆಂದಿರುವ ಬೆಂಗಳೂರುಮಂದಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ಕಳೆದೆರಡು ತಿಂಗಳಿನಿಂದ ಬೆಂಗಳೂರು ಜನರು ಬೇಸಿಗೆಯ ಧಗೆಯಿಂದ ತತ್ತರಿಸಿದ್ದು, ಇದೀಗ ಜನರ ನಿರೀಕ್ಷೆಯಂತೆಯೇ ಮಳೆರಾಯನ ಆಗಮನದ ಸುಳಿವು ವ್ಯಕ್ತವಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಹವಾಮಾನ ಇಲಾಖೆ, ಯುಗಾದಿ ಬಳಿಕ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಮುನ್ಸೂಚನೆ ನೀಡಿದೆ ಏಪ್ರಿಲ್ 13 ಮತ್ತು 14ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Good news for Bengaluru
IMD ERF predicts rainfall for the city from mid April 13th/14th, post Yugadhi
So the long wait for #BengaluruRains are going to end very soon
Eagerly waiting 🤩❣️ pic.twitter.com/NcLMSz0qLD
— Karnataka Weather (@Bnglrweatherman) April 4, 2024