ಧಾರವಾಡ: ರಾಜ್ಯದ್ಯಾಂತ ಪ್ರಾದೇಶಿಕ ಸಾರಿಗೆ ಕಚೇರಿಗಳ ಪ್ರಾರಂಭ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡದ ಉದ್ಘಾಟನೆ ಮಾರ್ಸ್ಕ್ 6ರಂದು ನಡೆದಿದ್ದು, ಚಾಲನೆ ನೀಡಿರುವ ಬಗ್ಗೆ ಮಾತನಾಡಿರುವ ಸಚಿವರು, ಈ ಕಚೇರಿಗೆ ನೂತನ ಕಟ್ಟಡವನ್ನು 1 ಎಕರೆ 20 ಗುಂಟೆ ವಿಸೀರ್ಣದಲ್ಲಿ 800 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದೆ. ಈ ಕಚೇರಿಯಲ್ಲೂ ಸಹ ಸಾರಿಗೆ ಇಲಾಖೆಗೆ ಸಂಬಂಧಿಸಿದ 30 ಕೆಲಸಗಳಿಗೆ ಆನಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.
ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡದ ಹೈಲೈಟ್ಸ್:
-
ಸದರಿ ಕಚೇರಿಯ ಕಾರ್ಯವ್ಯಾಪ್ತಿಯು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಗ್ರಾಮೀಣ ಮತ್ತು ಕುಂದಗೋಳ ತಾಲೂಕುಗಳನ್ನು ಹೊಂದಿರುತ್ತದೆ.
-
ಕಚೇರಿಗೆ ನೂತನ ಕಟ್ಟಡವನ್ನು 1 ಎಕರೆ 20 ಗುಂಟೆ ವಿಸೀರ್ಣದಲ್ಲಿ ರೂ.800.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.
-
ನೂತನ ಕಚೇರಿಗೆ ಒಟ್ಟಾರೆ 33 ಜನ ಅಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಯನ್ನು ಮಂಜೂರು ಮಾಡಲಾಗಿದೆ.
-
ಸದರಿ ಕಚೇರಿಯಲ್ಲೂ ಸಹ ಸಾರಿಗೆ ಇಲಾಖೆಗೆ ಸಂಬಂಧಿಸಿದ 30 ಕೆಲಸಗಳಿಗೆ ಆನಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
-
ಕಚೇರಿಯ ಕಾರ್ಯವ್ಯಾಪ್ತಿಯು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಗ್ರಾಮೀಣ ಮತ್ತು ಕುಂದಗೋಳ ತಾಲೂಕುಗಳನ್ನು ಹೊಂದಿರುತ್ತದೆ.
-
ಕಚೇರಿಗೆ ನೂತನ ಕಟ್ಟಡವನ್ನು 1 ಎಕರೆ 20 ಗುಂಟೆ ವಿಸೀರ್ಣದಲ್ಲಿ ರೂ.800.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.
-
ನೂತನ ಕಚೇರಿಗೆ ಒಟ್ಟಾರೆ 33 ಜನ ಅಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಯನ್ನು ಮಂಜೂರು ಮಾಡಲಾಗಿದೆ.
-
ಈ ಕಚೇರಿಯಲ್ಲೂ ಸಹ ಸಾರಿಗೆ ಇಲಾಖೆಗೆ ಸಂಬಂಧಿಸಿದ 30 ಕೆಲಸಗಳಿಗೆ ಆನಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.