ಜೈಪುರ: ಕಾಂಗ್ರೆಸ್ ಪಕ್ಷ ತೊರೆಯಲು ಬಯಸುವವರು ಕೂಡಲೇ ನಿರ್ಗಮಿಸಬಹುದು ಎಂದು ಅತೃಪ್ತರಿಗೆ ನಾಯಕ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆ ಕೊಟ್ಟಿದ್ದಾರೆ.
ಅವರು ಶುಕ್ರವಾರ ಅಧಿಕೃತ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡಿದ್ದು, ವಿಧಾನಸಭೆ ಚುನಾವಣೆ ನಂತರ ಮಹತ್ವದ ನಡೆ ಪ್ರಕಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷದಲ್ಲಿನ ಅತೃಪ್ತಿ ಬಗ್ಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
ಪಕ್ಷದ ಸದಸ್ಯರು ಕಾಂಗ್ರೆಸ್ ತೊರೆಯುವ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಗೆಹ್ಲೋಟ್, “ಪಕ್ಷವನ್ನು ತೊರೆಯಲು ಬಯಸುವವರು ತಕ್ಷಣ ಅದನ್ನು ಮಾಡಬೇಕು. ಇನ್ನು ಮುಂದೆ ಪಕ್ಷದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸದ ವ್ಯಕ್ತಿಗಳು ನಿರ್ಗಮಿಸಲು ಅವಕಾಶ ಇದೆ ಎಂದರು.


























































