ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿದೆ ಎನ್ನಲಾದ ಆರೋಪ ಕುರಿತಂತೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸಂಘರ್ಷ ತೀವ್ತಗೊಂಡಿದೆ. ವಿಧಾನ ಮಂಡಲ ಅಧಿವೇಶನ ಉಭಯ ಪಕ್ಷಗಳ ಶಾಸಕರ ನಡುವೆ ಜಟಾಪಟಿಗೆ ಸಾಕ್ಷಿಯಾದರೆ, ಸದನದ ಹೊರಗೂ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕಾಂಗ್ರೆಸ್ ಬಿಜೆಪಿ ನಡುವಿನ ಟ್ವೀಟ್ ವಾರ್ ಗಮನಸೆಳೆದಿದೆ.
ಪಾಕ್ ಪರ ಘೋಷಣೆ ಆರೋಪ ಕುರಿತಂತೆ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಪರಸ್ಪರ ಧೂಷಿಸುತ್ತಿವೆ. ಈ ಕೆಸರೆರಚಾಟ ಕುರಿತಂತೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಭಾರತದಲ್ಲಿ ಪಾ”ಕೈ”ಸ್ತಾನವನ್ನು ಬೆಂಬಲಿಸುವವರ ‘ಕೈ’ಗಳನ್ನು ಹೆಡೆಮುರಿ ಕಟ್ಟಿ ಎಂದು ಬಿಜೆಪಿ ಟ್ವೀಟ್ ಮಾಡಿದ್ದು, ಇದರಿಂದ ಸಿಡಿಮಿಡಿಗೊಂಡಿರುವ ಕಾಂಗ್ರೆಸ್ ಪಕ್ಷ, ‘ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿ ಪ್ರತಿ ಟ್ವೀಟ್ ಮಾಡಿದೆ.
ಅಯೋಗ್ಯ @BJP4Karnataka ,
ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ. pic.twitter.com/lzlKgZ7iK6
— Karnataka Congress (@INCKarnataka) February 28, 2024
ಇದಕ್ಕೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ನೀವು ದೂರು ದಾಖಲಿಸುವುದು ಪಾಕಿಸ್ಥಾನದಲ್ಲೋ ಅಥವಾ ಭಾರತದಲ್ಲೋ? ಎಂದು ಪ್ರಶ್ನಿಸಿ, ಕಾಂಗ್ರೆಸನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಈ ವ್ಯಂಗ್ಯದ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿರುವ ಕಾಂಗ್ರೆಸ್ ಪಕ್ಷ, ಪಾಕಿಸ್ತಾನವು ಬಿಜೆಪಿ ನಾಯಕರಿಗೆ ಪ್ರಿಯವಾದ ದೇಶ ಎಂದು ಜರಿದಿದೆ. ‘ನಿಮ್ಮ ‘ದುಬಾರಿ ಪಕೀರ‘ನಿಗೆ ಬಿರಿಯಾನಿ ತಿನ್ನುವುದಕ್ಕೆ ಪಾಕಿಸ್ತಾನ ಪ್ರಿಯವಾದ ಸ್ಥಳ, ನಿಮ್ಮ ಅಡ್ವಾಣಿಯವರ ಜನ್ಮಭೂಮಿ ಪಾಕಿಸ್ತಾನ, ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಿ ಜಿನ್ನಾರನ್ನು ಹೊಗಳಿದ ಸ್ಥಳ ಪಾಕಿಸ್ತಾನ. ನಿಮ್ಮ ಬಾಯಲ್ಲಿ, ಮನದಲ್ಲಿ ಸದಾ ನಲಿದಾಡುವುದು – ಪಾಕಿಸ್ತಾನ!’ ಎಂದಿದೆ.
‘ನಾವು ದೂರು ದಾಖಲಿಸುವುದು ನಾವೇ ಹೋರಾಡಿ ದಕ್ಕಿಸಿಕೊಂಡ ಭಾರತದಲ್ಲಿ, ನಾವೇ ಜಾರಿಗೊಳಿಸಿದ ಸಂವಿಧಾನವಿರುವ ಭಾರತದಲ್ಲಿ, ನಾವೇ ಒಗ್ಗೂಡಿಸಿದ ಭಾರತದಲ್ಲಿ’ ಎಂದು ಉತ್ತರಿಸಿರುವ ಕಾಂಗ್ರೆಸ್, ‘ದೂರು ದಾಖಲಾದ ನಂತರ ನೀವು ಯಾವ ದೇಶಕ್ಕೆ ವೀಸಾ ಪಡೆಯುತ್ತೀರಿ? ನಿಮ್ಮ ಪ್ರೀತಿಯ ಪಾಕಿಸ್ತಾನಕ್ಕೋ? ನಿತ್ಯಾನಂದನ ಕೈಲಾಸಕ್ಕೋ?’ ಎಂದು ಪ್ರಶ್ನೆಗಳನ್ನು ಬಿಜೆಪಿಯ ಮುಂದಿಟ್ಟಿದೆ.
Dear @BJP4Karnataka,
ನಿಮ್ಮ ‘ದುಬಾರಿ ಪಕೀರ‘ನಿಗೆ ಬಿರಿಯಾನಿ ತಿನ್ನುವುದಕ್ಕೆ ಪಾಕಿಸ್ತಾನ ಪ್ರಿಯವಾದ ಸ್ಥಳ,
ನಿಮ್ಮ ಅಡ್ವಾಣಿಯವರ ಜನ್ಮಭೂಮಿ ಪಾಕಿಸ್ತಾನ, ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಿ ಜಿನ್ನಾರನ್ನು ಹೊಗಳಿದ ಸ್ಥಳ ಪಾಕಿಸ್ತಾನ.
ನಿಮ್ಮ ಬಾಯಲ್ಲಿ, ಮನದಲ್ಲಿ ಸದಾ ನಲಿದಾಡುವುದು – ಪಾಕಿಸ್ತಾನ!
ನಾವು ದೂರು ದಾಖಲಿಸುವುದು
ನಾವೇ… https://t.co/bYRPBQB2MO— Karnataka Congress (@INCKarnataka) February 28, 2024