ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 30ಕ್ಕೂ ಹೆಚ್ಚು ವಾಹನಗಳು ಸುಟ್ಟುಹೋಗಿವೆ.
ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಬಳಿ ತಡರಾತ್ರಿ ಪ್ಲಾಸ್ಟಿಕ್ ಗೋದಾಮು ಶೆಡ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾರ್ಖಾನೆ ಸಮೀಪದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿ ಈ ವಾಹನಗಳಿಗೂ ಹಬ್ಬಿದೆ. ಪಾರ್ಕ್ ಮಾಡಲಾದ 30ಕ್ಕೂಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸ್ಥಳದಲ್ಲಿ ಆಟೋ ಸಹಿತ ವಿವಿಧ ತವಾಹನಗಳನ್ನು ಸ್ಥಳೀಯರು ನಿಲ್ಲಿಸುತ್ತಿದ್ದರು. ಇದೀಗ ವಾಹನಗಳು ಬಿರೇಂಕಿಗೆ ಆಹುತಿಯಾಗಿದ್ದು ವಾಹನಗಳನ್ನು ಕಳೆದುಕೊಂಡವರು ಕಣ್ಣೀರು ಹಾಕುತ್ತಿದ್ದಾರೆ.



















































