ಚಾಮರಾಜನಗರ: ‘ಏನಿಲ್ಲಾ ಏನಿಲ್ಲಾ..’ ಹಾಡು ಇದೀಗ ಭಾರೀ ಸದ್ದು ಮಾಡುತ್ತಿದೆ. ಅದೇ ಹಾಡಿನ ‘ಕರಿಮಣಿ ಮಾಲೀಕ ನೀನಲ್ಲ..’ ಎಂಬ ಸಾಲು ಕ್ರೇಜ್ ಹುಟ್ಟಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ ಅಭಿನಯದ ‘ಉಪೇಂದ್ರ’ ಚಿತ್ರದ ಈ ಹಾಡು ‘ಅರ್ಥಗರ್ಭಿತ’ ಸಾಹಿತ್ಯವಿದೆ. ಹಾಗಾಗಿ ಎಲ್ಲರ ಮೆಚ್ಚುಗೆ ಗಳಿಸಿದ ಹಾಡು ಇದಾಗಿದೆ.
ಸುಮಾರು ಎರಡು ದಶಕಗಳ ಹಿಂದಿನ ಸಿನಿಮಾದ ಹಾಡು ಇದಾಗಿದ್ದು ಇದೀಗ ಮತ್ತೆ ಈ ಹಾಡು ಸದ್ದೆಬ್ಬಿಸಿದೆ. ಈ ಹಾಡಿನ ತುಣುಕುಗಳನ್ನು ಬಳಸಿ ನೂರಾರು ರೀಲ್ಸ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಕತ್ ಲೈಕ್ಸನ್ನೂ ಗಿಟ್ಟಿಸಿಕೊಳ್ಳುತ್ತಿದೆ.
https://www.youtube.com/watch?v=TOFaMBL699A
ಈ ರೀಲ್ಸ್ ಹಾವಳಿಗೆ ನೊಂದು ಚಾಮರಾಜನಗರದಲ್ಲೊಬ್ಬ ಜೀವವನ್ನೇ ಆಹುತಿ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಉಪೇಂದ್ರ’ ಚಿತ್ರದ ‘ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ’ ಹಾಡಿನ ಸಾಲನ್ನು ಬಳಸಿ ರೀಲ್ಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ತುಂಬೆಲ್ಲಾ ಈ ಹಾಡಿನ ರೀಲ್ಸ್ ಹರಿದಾಡುತ್ತಿದ್ದು ಇದರಿಂದ ಪ್ರೇರಿತಳಾದ ಈ ಮಹಿಳೆ ಕೂಡಾ ರೀಲ್ಸ್ ಮಾಡಿ ಗಮನಸೆಳೆದಿದ್ದಾರೆ. ಆದರೆ, ಈ ರೀಲ್’ನಿಂದ ಬೇಸರಗೊಂಡ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕಳವಳಕಾರಿ ಸಂಗತಿ. ಹನೂರು ಸಮೀಪ 34 ವರ್ಷದ ಕುಮಾರ್ ಎಂಬ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಪ್ರಕರಣ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



























































