ಬಳ್ಳಾರಿ: ಅಕ್ರಮಗಳ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ರಾಜ್ಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ. ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾ.ರಾ.ಭರತ್ ರೆಡ್ಡಿ ನಿವಾಸದ ಮೇಲೆ ED ಅಧಿಕಾರಿಗಳು ಇಂದು (ಶನಿವಾರ) ಬೆಳಗ್ಗೆ ದಾಳಿ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಬೆಂಗಳೂರಿನ ಬಂದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದು ಬೆಳ್ಳಂಬೆಳಿಗ್ಗೆ ಈ ದಾಳಿ ನಡೆಸಿದೆ.
ಭರತ ರೆಡ್ಡಿ ಅವರ ಮನೆ, ತಂದೆಯ ಕಚೇರಿ, ಹಾಗೂ ಸಂಬಂಧಿಕರ ಮನೆ, ಕಚೇರಿಯ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.


























































