ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿ ಸಂಬಂಧ ಹಲವಾರು ಯೋಜನರ್ಗಳನ್ನು ಜಾರಿಗೊಳಿಸಿದ್ದು, ಇದೀಗ ‘ಮಾಂಗಲ್ಯ ಭಾಗ್ಯ’ ಯೋಜನೆ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ಈ ನಡುವೆಯೇ, ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರವರ್ಗ ‘ಎ’ ಮತ್ತು ‘ಬಿ’ ಅಧಿಸೂಚಿತ ದೇವಾಲಯಗಳಲ್ಲಿ ‘ಮಾಂಗಲ್ಯ ಭಾಗ್ಯ’ ಯೋಜನೆ ಅಡಿ ಸಾಮೂಹಿಕ ವಿವಾಹಗಳ ಆಯೋಜನೆ ಕುರಿತಂತೆ ಸರ್ಕಾರ ಮತ್ತಷ್ಟು ಮಾಹಿತಿ ಹಂಚಿಕೊಂಡಿದೆ. ‘ಮಾಂಗಲ್ಯ ಭಾಗ್ಯ’ (ಸಾಮೂಹಿಕ ಸರಳ ವಿವಾಹ) ಕಾರ್ಯಕ್ರಮದಡಿ 31.01.2024ರಂದು ರಾಜ್ಯದ ದೇವಾಲಯಗಳಲ್ಲಿ ಒಟ್ಟು 139 ಜೋಡಿಗಳ ವಿವರ ಹೀಗಿದೆ:ವಿವಾಹ ನೆರವೇರಿದೆ.
‘ಮಾಂಗಲ್ಯ ಭಾಗ್ಯ’ ಯೋಜನೆಯಡಿಯಲ್ಲಿ ವಧು-ವರರಿಗೆ, ತಾಳಿ,ಬಟ್ಟೆ, ಸಹಿತ ಅಗತ್ಯ ವಸ್ತುಗಳ ಖರೀದಿಗಾಗಿ 55,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ಆದಾಯ ಇರುವ ದೇವಾಲಯಗಳ ನಿಧಿಯಿಂದ ಬಳಸಿಕೊಳ್ಳಲಾಗುವುದು. ಆದಾಯ ಕಡಿಮೆ ಇರುವ ದೇವಾಲಯಗಳಲ್ಲಿ 55,000 ರೂಪಾಯಿ ಪ್ರೋತ್ಸಾಹ ಧನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ನೀಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.