ಬೆಂಗಳೂರು: ಮೈಸೂರಿನ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಬರುವ ಭಕ್ತಾಧಿಗಳ ಮತ್ತು ಚಾಮುಂಡಿ ಬೆಟ್ಟದ ಗ್ರಾಮಸ್ಥರ ಅನುಕೂಲಕ್ಕಾಗಿ ‘ಕೇನ್ಸ್’ ಸಂಸ್ಥೆಯ ವತಿಯಿಂದ ಸುಸಜ್ಜಿತವಾದ ಆಂಬ್ಯುಲೆನ್ಸನ್ನು ನೀಡಲಾಗಿದೆ. ಈ ಆಂಬ್ಯುಲೆನ್ಸ್’ನ್ನು ಮುಜರಾಯಿ ಖಾತೆ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 28.01.2024 ರಂದು ಲೋಕಾರ್ಪಣೆ ಮಾಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು ಧಾರ್ಮಿಕ ದತ್ತಿ ಆಯುಕ್ತರ ಕಛೇರಿಯ ಕೇಂದ್ರ ಸ್ಥಾನಿಕ ಸಹಾಯಕ ಎಸ್.ಎನ್.ಯತಿರಾಜ್ ಸಂಪತ್ ಕುಮಾರ್ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಮಾರು 27 ಲಕ್ಷ ರೂಪಾಯಿ ಬೆಲೆಯ, C Type, 2024/34.62 Force ಮಾದರಿಯ ಈ ಆಂಬ್ಯುಲೆನ್ಸನ್ನು ಸವಿತಾ ರಮೇಶ್, ರಮೇಶ್ ಕುನ್ನಿ ಕಣ್ಣನ್, ರಾಜೇಶ್ ಶರ್ಮ ಅವರು ದೇಣಿಗೆ ರೂಪದಲ್ಲಿ ಸಮರ್ಪಿಸಿದ್ದಾರೆ. 2 ಸಿಲಿಂಡರ್, LED ಲೈಟ್ಸ್, 9 ಆಸನಗಳು, ಕಸದ ಬುಟ್ಟಿಗಳು, AC ವಿಶೇಷತೆಗಳನ್ನೂ ಈ ಆಂಬ್ಯುಲೆನ್ಸ್ ಹೊಂದಿದೆ
























































