ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ‘ಬಿಗ್ ಬಾಸ್’ ಸೀಸನ್ 10 ರಿಯಾಲಿಟಿ ಷೋನಲ್ಲಿ ಕಾರ್ತಿಕ್ ಮಹೇಶ್ ಜಯಶಾಲಿಯಾಗಿದ್ದಾರೆ. ವಿನ್ನರ್ ಆಗಿ ಘೋಷಿಸಿಕೊಂಡು ಪ್ರತಿಷ್ಠಿತ ಟ್ರೋಫಿಯನ್ನು ಕಾರ್ತಿಕ್ ಪಡೆದುಕೊಂಡರೂ ವಿಜೇತೆ ಎಂದು ಬಿಂಬಿತವಾದದ್ದು ಮಾತ್ರ ನಟಿ ಸಂಗೀತ ಶೃಂಗೇರಿ.
ಗೂಗಲ್ ಪ್ರಕಾರ ಗೆದ್ದಿರೋದು ಸಂಗೀತಾ..
‘ಡೊಳ್ಳು’ ನಟ ಖ್ಯಾತಿಯ ಕಾರ್ತಿಕ್ ಮಹೇಶ್ ಅವರನ್ನು ಭಾನುವಾರ ನಡೆದ ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ವಿನ್ನರ್ ಎಂದು ಘೋಷಿಸಿದರು. ಆದರೆ ಗೂಗಲ್ ರಿವೀವ್ ಪ್ರಕಾರ ಬಿಗ್‌ಬಾಸ್ ಸೀಸನ್ 10ರ ಟ್ರೋಫಿ ಸಂಗೀತಾ ಶೃಂಗೇರಿ ಅವರದ್ದು. ಗೂಗಲ್‌ನಲ್ಲಿ ಸಂಗೀತಾ ಶೃಂಗೇರಿ ಹೆಸರು ಕೇಳಿಬಂದಿತ್ತು.
2024 ಜನವರಿ 27ರಂತೆ ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರಾಂಡ್ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಗೂಗಲ್ ಸರ್ಚ್‌ಲ್ಲಿ ಬಿಂಬಿತವಾಗಿತ್ತು. ವಿಜೇತ ಸ್ಪರ್ಧಿ ಸಂಗೀತ ಅವರಿಗೆ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ನಗದು ಮತ್ತು ಒಂದು ಕಾರು ಬಹುಮಾನವಾಗಿ ಸಿಗಲಿದೆ ಎಂದೂ ಫಲಿತಾಂಶ ಲಭ್ಯವಾಗುತ್ತಿತ್ತು. ಆದರೆ ಅಂತಿಮವಾಗಿ ಘೋಷಣೆಯಾಗಿದ್ದೇ ಬೇರೆ. ಕಾರ್ತಿಕ್ ಮಹೇಶ್ ವಿನ್ನರ್ ಆದ್ರು, ರನ್ನರ್ ಅಪ್ ಆಗಿ ಪ್ರತಾಪ್ ಬಿಂಬಿತರಾದರು. ಅಂತಿಮ ಕ್ಷಣಕ್ಕೆ ಮೊದಲೇ, ಅಂದರೆ ೨ನೇ ರನ್ನರ್ ಅಪ್ ಆಗಿ ಸಂಗೀತ ಶೃಂಗೇರಿ ಗುರುತಾದರು. ಸಂಗೀತ ವೇದಿಕೆಯಿಂದ ನಿರ್ಗಮನವಾದಾಗ ಅದಾಗಲೇ ಹೊರಗುಳಿದು ವೀಕ್ಷಿಸುತ್ತಿದ್ದ ಸಹಸ್ಪರ್ಧಿಗಳಿಗೂ ಶಾಕಿಂಗ್ ಸನ್ನಿವೇಶ ಅದಾಗಿತ್ತು.
























































