ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ‘ಬಿಗ್ ಬಾಸ್’ ಸೀಸನ್ 10 ರಿಯಾಲಿಟಿ ಷೋನಲ್ಲಿ ಕಾರ್ತಿಕ್ ಮಹೇಶ್ ಜಯಶಾಲಿಯಾಗಿದ್ದಾರೆ.
ಡೊಳ್ಳು ನಟ ಕಾರ್ತಿಕ್ ಮ ಹೇಶ್ ಬಿಗ್ ಬಾಸ್ ಮನೆಗೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಎಲ್ಲರೂ ನಿರ್ಗಮಿಸಿದ ನಂತರವೇ ಅವರು ಟ್ರೋಫಿಯೊಂದಿಗೆ ಮರಳಿರುವುದೂ ವಿಶೇಷ. ಭಾನುವಾರ ನಡೆದ ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಕಿಚ್ಚ ಸುದೀಪ್ ವಿನ್ನರ್ ಮತ್ತು ರನ್ನರ್ ಪಡೆದ ವೋಟ್ ರಿವೀಲ್ ಮಾಡಿದರು.
ಬಿಗ್ ಬಾಸ್ ಕನ್ನಡ 10 ವಿನ್ನಿಂಗ್ ಮೊಮೆಂಟ್!
ಬಿಗ್ ಬಾಸ್ ಗ್ರಾಂಡ್ ಫಿನಾಲೆ#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/1VCEIU8pkr
— Colors Kannada (@ColorsKannada) January 28, 2024
ಅತೀ ಹೆಚ್ಚು ಮತಗಳನ್ನು ಗಳಿಸಿದ ಕಾರ್ತಿಕ್ ಮಹೇಶ್ ಅವರನ್ನು ಕಿಚ್ಚ ಸುದೀಪ್ ಅವರು ಜಯಶಾಲಿ ಎಂದು ಘೋಷಿಸಿದರು. ಡ್ರೋನ್ ಪ್ರತಾಪ್ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದಾರೆ.
ಕಾರ್ತಿಕ್ ಮಹೇಶ್ 2,97,39,904 ವೋಟ್ ಪಡೆದರೆ, ರನ್ನರ್ ಅಪ್ ಡ್ರೋನ್ ಪ್ರತಾಪ್ 2,20,04,202 ಮತಗಳನ್ನು ಪಡೆದಿದ್ದಾರೆ. ಇನ್ನು, ಗೆಲುವಿನ ನಿರೀಕ್ಷೆಯಲ್ಲಿದ್ದ ನಟಿ ಸಂಗೀತ ಶೃಂಗೇರಿ ಎರಡನೇ ರನ್ನರ್ ಅಪ್ ಆದರೂ. ನಟ ವಿನಯ್ ಅವರು ಮೂರನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

























































