ಪಾಟ್ನಾ: ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಬೆಂಬಲದೊಂದಿಗೆ 18 ತಿಂಗಳ ಹಿಂದೆ ರಚನೆಯಾಗಿದ್ದ ಮಹಾಮೈತ್ರಿಕೂಟಕ್ಕೆ ಅಂತ್ಯ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತ್ಯ ಹಾಡಿದ್ದಾರೆ. ನಿರೀಕ್ಷೆಯಂತೆಯೇ ಅವರು ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಇದೀಗ ಬಿಹಾರದಲ್ಲಿ ಜನತಾ ದಳ (ಯುನೈಟೆಡ್) ಅಧ್ಯಕ್ಷರೂ ಆಗಿರುವ ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸುವ ತಯಾರಿಯಲ್ಲಿದ್ದಾರೆ.
ಬಿಹಾರದಲ್ಲಿನ ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣಾ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ 40-ಸದಸ್ಯರನ್ನು ಹೊಂದಿರುವ ಬಿಜೆಪಿ, ಈ ರಾಜ್ಯದಿಂದ 17 ಸಂಸದರನ್ನು ಲೋಕಸಭೆಗೆ ಗೆದ್ದುಕೊಟ್ಟಿದೆ. ಜೆಡಿ(ಯು) 16. ಹಾಗೂ ಎನ್ಡಿಎ ಮಿತ್ರಪಕ್ಷವಾದ ಎಲ್ಜೆಪಿಯು ಎರಡು ಸ್ಥಾನಗಳನ್ನು ಹೊಂದಿವೆ. ಇದೀಗ ಹೊಸ ಬೆಳವಣಿಗೆಯು ಬಿಜೆಪಿ ನೇತೃತ್ವದ ಎನ್ಡಿಎಗೆ ವರದಾನವಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
























































