ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ರಣವ್ಯೂಹ ರಚಿಸುತ್ತಿರುವ ಬಿಜೆಪಿ, ಇದೀಗ ವಿವಿಧ ರಾಜ್ಯಗಳಿಗೆ ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಒಟ್ಟು 23 ಮಂದಿಯನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಉಸ್ತುವಾರಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.
ಕರ್ನಾಟಕಕ್ಕೆ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿರುವ ಹೈಕಮಾಂಡ್, ಸುಧಾಕರ್ ರೆಡ್ಡ ಅವರನ್ನು ಸಹ ಉಸ್ತುವಾರಿಯನ್ನಾಗಿ ನಿಯುಕ್ತಿ ಮಾಡಿದೆ. ಇದೇ ವೇಳೆ, ಕರ್ನಾಟಕದ ನಿರ್ಮಲ್ ಕುಮಾರ್ ಸುರಾನಾ ಅವರಿಗೆ ಪುದುಚೇರಿಯ ಉಸ್ತುವಾರಿ ವಹಿಸಲಾಗಿದೆ.
ಇತರ ರಾಜ್ಯಗಳ ಉಸ್ತುವಾರಿಗಳ ಪಟ್ಟಿ:
- ಉತ್ತರ ಪ್ರದೇಶ – ಬೈಜಯಂತ್ ಪಾಂಡಾ,
- ಬಿಹಾರ- ವಿನೋದ್ ತಾವ್ಡೆ
- ಕರ್ನಾಟಕ- ರಾಧಾ ಮೋಹನ್ ದಾಸ್ ಅಗರ್ವಾಲ್
- ತಮಿಳುನಾಡು – ಅರವಿಂದ್ ಮೆನನ್,
- ಕೇರಳ – ಪ್ರಕಾಶ್ ಜಾವಡೇಕರ್
- ಲಕ್ಷದ್ವೀಪ- ಅರವಿಂದ್ ಮೆನನ್,
- ಪುದುಚೇರಿ- ನಿರ್ಮಲ್ ಕುಮಾರ್ ಸುರಾನಾ,
- ಅಂಡಮಾನ್-ನಿಕೋಬಾರ್- ವೈ ಸತ್ಯ ಕುಮಾರ್,
- ಅರುಣಾಚಲ ಪ್ರದೇಶ- ಅಶೋಕ್ ಸಿಂಘಾಲ್,
- ಚಂಡೀಗಢ- ವಿಜಯಭಾಯಿ ರೂಪಾನಿ,
- ಗೋವಾ- ಆಶಿಶ್ ಸೂದ್,
- ಜಾರ್ಖಂಡ್-ಲಕ್ಷ್ಮೀಕಾಂತ ಬಾಜಪೇಯಿ,
- ಲಡಾಖ್- ತರುಣ್ ಚುಗ್,
- ಸಿಕ್ಕಿಂ- ದಿಲೀಪ್ ಜೈಸ್ವಾಲ್,
- ಉತ್ತರಾಖಂಡ- ದುಶ್ಯಂತ್ ಕುಮಾರ್ ಗೌತಮ್,
- ಹರಿಯಾಣ- ಬಿಪ್ಲಬ್ ಕುಮಾರ್ ದೇವ್,
- ಹಿಮಾಚಲ ಪ್ರದೇಶ- ಶ್ರೀಕಾಂತ್ ಶರ್ಮಾ,
- ಮಧ್ಯಪ್ರದೇಶ- ಮಹೇಂದ್ರ ಕುಮಾರ್ ಸಿಂಗ್,
- ಒಡಿಶಾ- ವಿಜಯಪಾಲ್ ಸಿಂಗ್ ತೋಮರ್,
- ಪಶ್ಚಿಮ ಬಂಗಾಳ- ಮಂಗಲ್ ಪಾಂಡೆ.


























































