ಟೋಕಿಯೊ: ತನ್ನ ಚಂದ್ರನ ಶೋಧಕ, ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ (ಎಸ್‌ಎಲ್‌ಐಎಂ) ಚಂದ್ರನ ಮೇಲ್ಮೈಯಲ್ಲಿ ತನ್ನ ಗುರಿಯ ಸಮೀಪ ಯಶಸ್ವಿಯಾಗಿ ಇಳಿದಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ ವರದಿ ಮಾಡಿದೆ. ಈ ಸಾಧನೆಯು ಉದ್ದೇಶಿತ ಸ್ಥಳದಿಂದ 100 ಮೀಟರ್‌ಗಳೊಳಗೆ ಅಭೂತಪೂರ್ವ ಪಿನ್‌ಪಾಯಿಂಟ್ ಲ್ಯಾಂಡಿಂಗ್ ಅನ್ನು ಗುರುತಿಸುತ್ತದೆ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ ಹೇಳಿದೆ.
ಕಳೆದ ಶನಿವಾರ ಜಪಾನಿನ ಸಮಯ ಮಧ್ಯರಾತ್ರಿಯ ನಂತರ ಚಂದ್ರನ ಲ್ಯಾಂಡಿಂಗ್ ಆಗಿದೆ. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇರಿಸುವ ಐದನೇ ರಾಷ್ಟ್ರವಾಗಿ ಜಪಾನ್ ಗಮನಸೆಳೆದಿದೆ.
































































