ಗದಗ: ರಾಜಕೀಯ ಏರುಪೇರಿನ ಸನ್ನಿವೇಶಗಳ ಬಗ್ಗೆ, ಸಾಮಾಜಿಕ ಘಟನಾವಳಿಗಳ ಬಗ್ಗೆ ಭವಿಷ್ಯ ನುಡಿಯುತ್ತಾ ನಾಡಿನ ಗಮನಸೆಳೆದಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಆತಂಕಕಾರಿ ಘಟನೆಗಳ ಸಾಧಯತೆಗಳ ಬಗ್ಗೆ ಭವಿಷ್ಯ ಹೇಳಿದ್ದಾರೆ.
ಈ ವರ್ಷ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಅಪಮೃತ್ಯುಗೊಳಗಾಗುವ ಸಾಧದಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಗದಗ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಜಗತ್ತಿನಲ್ಲಿ ಸಂಭವಿಸಬಹುದಾದ ಸಂಗತಿಗಳತ್ತ ವಿಶ್ಲೇಷಣೆ ಮಾಡಿದರು. ದೇವರಿಗೆ ಶರಣಾಗಬೇಕಿದೆ. ಅಂತಹಾ ಬೆಳವಣಿಗೆಗಳು ನಡೆಯುತ್ತಿರುವುದು ಒಳ್ಳೆಯ ಸಂಕೇತವಾಗಿದೆ ಎಂದವರು ಸಮಾಧಾನದ ಮಾತುಗಳನ್ನೂ ಆಡಿದ್ದಾರೆ.
ಶ್ರೀಗಳು ನುಡಿದ ಭವಿಷ್ಯದ ಹೈಲೈಟ್ಸ್:
-
2024 ಇಸವಿ ಜಗತ್ತಿಗೆ ಒಳ್ಳೆಯ ಕಾಲವಲ್ಲ , ಈ ವರ್ಷ ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಇಬ್ಬರು ಪ್ರಧಾನಿಗಳು ಸಾವಿಗೀಡಾಗುವ ಸಾಧ್ಯತೆಗಳಿವೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ
-
2024ರಲ್ಲಿ ಅಕಾಲಿಕ ಮಳೆ-ಪ್ರವಾಹದಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ.
-
ಭೂಕಂಪದಂತಹಾ ವಿಕೋಪ, ಅಣುಬಾಂಬ್ ಸ್ಪೋಟದಂತಹ ಕೃತ್ಯಗಳು ಸಂಭವಿಸಬಹುದು.
-
ಯುದ್ಧದಿಂದ ಜಗತ್ತು ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗಬಹುದು.
-
ದೇವರ ಬಗ್ಗೆ ನಂಬಿಕೆ ಇಡಬೇಕಿದೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ಮಿಸಿ ಸ್ಮರಣೆ ಮಾಡುವುದು ಸಾಮಾನ್ಯವಾಗಿದೆ. ಅದರಂತೆ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆ ಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
























































