ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ದೇಗುಲವು ಭಕ್ತಿ ಕೈಂಕರ್ಯಕ್ಕೆ ಸಮರ್ಪಣೆಯಾಗುವ ತಯಾರಿಯ ನಡುವೆ ನಾಡಿನಾದ್ಯಂತ ಆವರಿಸಿರುವ ಸಡಗರವು ಹಬ್ಬದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಅಯೋಧ್ಯೆ ಕೈಂಕರ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಎಲ್ಲೆಲ್ಲೂ ರಾಮೋತ್ಸವ ಗಮನಸೆಳೆಯುತ್ತಿದೆ. ಜನಸಮೂಹವು ತಮ್ಮದೇ ಶೈಲಿಯಲ್ಲಿ ರಾಮನ ಕುರಿತಂತೆ ಭಕ್ತಿ ತೋರಿಸುತ್ತಿರುವ ವೈಖರಿಯೂ ಚಿತ್ತ ಕೇಂದ್ರೀಕರಿಸುತ್ತಿದೆ.
ಈ ನಡುವೆ, ನಟ ನವರಸನಾಯಕ ಜಗ್ಗೇಶ್ ಅವರು ಹಾಡಿನ ಮೂಲಕ ಶ್ರೀರಾಮೋತ್ಸವವನ್ನು ಸಂಭ್ರಮಿಸಿದ ವೈಖರಿಗೆ ನೆಟ್ಟಿಗರು ಸಕತ್ ಲೈಕ್ಸ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಡಿನ ತುಣುಕನ್ನು ಪೋಸ್ಟ್ ಹಾಕಿರುವ ಜಗ್ಗೇಶ್, ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಎಂದಿದ್ದಾರೆ..’ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ’ ಎಂದು ಬರೆದುಕೊಂಡಿರುವ ಅವರು, ರಾಮನ ಕುರಿತು ಹಾಡಿ, ಅದನ್ನು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟನ್ನು ಫಾಲೊವರ್ಸ್ ರಿ-ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ.
ಶಾಸ್ತ್ರೀಯವಾಗಿ ಬಂದರು ಸರಿ ಇಲ್ಲದಿದ್ದರು ಸರಿ ರಾಮನಿಗಾಗಿ
ಸಂಕೋಚಬಿಟ್ಟು ಯತ್ನಿಸಿ ನಿಮ್ಮ
ಜಾಲತಾಣದಲ್ಲಿ tagಮಾಡಿ ಎಂದು ಪ್ರಾರ್ಥನೆ🙏
ರಾಮನಿಗಾಗಿ ಸಣ್ಣಭಕ್ತಿಯ ಪ್ರಯತ್ನ
ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ.
ಜೈ ಶ್ರೀರಾಮ🙏@narendramodi@BYVijayendra pic.twitter.com/dCl4G787IM— ನವರಸನಾಯಕ ಜಗ್ಗೇಶ್(modi ka parivar) (@Jaggesh2) January 21, 2024























































