ಬೆಂಗಳೂರು: ನಾಡು ಹೊಸ ವರ್ಷಾಚರಣೆಯ ಸಂದರ್ಭದ ಸಂಭ್ರಮದಲ್ಲಿದೆ. ನಾಡಿನ ಜನರು ತಾವು ಕಳೆದ ಕಹಿ ಕಷ್ಟಗಳನ್ನು ಮರೆತು ಸಿಹಿ ವರ್ಷವನ್ನು ಸ್ವಾಗತಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿರುವ ನಟ ಯಶ್, ‘ತನ್ನ ಅಭಿಮಾನಿಗಳಿಗೆ ಜನವರಿ 8 ಹೊಸ ವರ್ಷ’ ಎಂದಿರುವ ಸಾಲುಗಳು ಗಮನಸೆಳೆದಿವೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ರಾಕಿಂಗ್ ಸ್ಟಾರ್ ಯಶ್, ‘ಫ್ಯಾನ್ಸ್ ಗಳಿಗೆ ಜನವರಿ 8 ಹೊಸ ವರ್ಷ.. 7 Days To Go’ ಎಂದು ಬರೆದುಕೊಂಡಿದ್ದಾರೆ.
ತಮ್ಮ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ‘Toxic’ ಚಿತ್ರ ಮುಂದಿನ ವಾರ ಮುನ್ನುಡಿ ಬರೆಯಲಿದೆ. ಈ ಸಂದಭವನ್ನು ಬೊಟ್ಟು ಮಾಡಿ ಯಶ್ ಅವರು ‘ಜನವರಿ 8 ಹೊಸ ವರ್ಷ’ ಎಂದಿದ್ದಾರೆ. ಯಶ್ ಅಭಿಮಾನಿಗಳು ಈ ಪೋಸ್ಟ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ.
https://twitter.com/YashBOSSDHF001/status/1741691116502782322