ಕೋಮಲ ತುಟಿಯನ್ನು ಯಾರು ತಾನೇ ಇಷ್ಟ ಪಡಲ್ಲ ಹೇಳಿ. ಚಂದದ ಅಂದದ ತುಟಿಯನ್ನು ಹೊಂದಲು ಮಹಿಳೆಯಯರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆಯಿಂದ ಪಾರಾಗಲು ಪಡುವ ಕಷ್ಟ ಅಷ್ಟಿಷ್ಟಲ್ಲ.
ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಸಾಮಾನ್ಯ. ಈ ಸಮಸ್ಯೆಗೆ ಮನೆಮದ್ದು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಪ್ರಮುಖವಾಗಿ ತಮ್ಮ ಆಹಾರವೇ ಔಷಧಿಯಾಗುತ್ತದೆ ಎಂಬ ಸೂತ್ರವನ್ನು ಅನುಸರಿಸಬಹುದು. ಅದರಲ್ಲೂ ತುಪ್ಪ ನೈಸರ್ಗಿಕ ಆಹಾರ ಎಂಬುದೇ ಇಲ್ಲಿ ಪ್ರಮುಖ ವಿಚಾರ. ಮನೆಯಲ್ಲೇ ತಯಾರಿಸಿದ ದೇಸೀ ತುಪ್ಪವನ್ನು ತುಟಿಗೆ ಹಚ್ಚುವುದರಿಂದ ಒಡೆಯುವ ಸಮಸ್ಯೆ ದೂರವಾಗುತ್ತದೆ. ಒಣಗುವ ಸಾಧ್ಯತೆಗಳನ್ನೂ ತುಪ್ಪ ತಡೆಗಟ್ಟುತ್ತದೆ. ಸದಾ ತೇವಾಂಶದಿಂದ ಕಾಯ್ದುಕೊಳ್ಳುವ ಗುಣವನ್ನು ತುಪ್ಪ ಹೊಂದಿದ್ದು, ಬಿಳಿ ಸಿಪ್ಪೆ ಏಳುತ್ತಿದ್ದರೆ ಅಂತಹಾ ಸಮಸ್ಯೆಯನ್ನು ದೂರ ಮಾಡಬಹುದು.
ತುಪ್ಪದಲ್ಲಿರುವ ಕೊಬ್ಬು ಹಾಗೂ ಪ್ರೊಟೀನ್ ಗಳು ಕಪ್ಪಗಿರುವ ತುಟಿಯನ್ನು ಕ್ರಮೇಣ ಕೆಂದುಟಿಯನ್ನಾಗಿ ಪರಿವರ್ತಿಸುತ್ತದೆ. ಇದೇ ವೇಳೆ, ಹೆಚ್ಚು ಖಾರ ದಿಂದ ದೂರ ಇದ್ದಾರೆ ಒಳ್ಳೆಯದು. ಜೊತೆಗೆ ಸಾಕಷ್ಟು ನೀರು ಕುಡಿಯುವ ಅಭ್ಯಾಸವೂ ಉತ್ತಮ.

















































