ನವದೆಹಲಿ: ಇಡೀ ದೇಶವೇ ಬೆಚ್ಚಿ ಬೀಳುವ ಸನ್ನಿವೇಶವೊಂದು ಇಂದು ಸಂಸತ್ ಭವನದ ಒಳಗೆ ನಡೆದಿದೆ. ಈ ಪ್ರಸಂಗವು ಸಂಸತ್ತಿನ ಭದ್ರತೆಯಲ್ಲಿ ಭಾರೀ ಭದ್ರತಾ ಲೋಪವಾಗಿರುವುದಕ್ಕೆ ಸಾಕ್ಷಿಯಾಗಿದೆ.

ನೂತನ ಸಂಸತ್ ಕಟ್ಟಡದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆಯೇ ಸಂದರ್ಶಕರ ಗ್ಯಾಲರಿಯಿಂದ ಅಪರಿಚಿತ ವ್ಯಕ್ತಿಯೊಬ್ಬ ಸದನದೊಳಗೆ ಜಿಗಿದು ಕೋಲಾಹಲ ಸೃಷ್ಟಿಸಿದ್ದಾನೆ. ಸದನದ ಕಲಾಪ ವೀಕ್ಷಿಸುವ ಸ್ಥಳಕ್ಕೆ ಪ್ರವೇಶಿಸಿದ್ದ ಇಬ್ಬರು ಅಪರಿಚಿತರ ಪೈಕಿ ಒಬ್ಬಾತ ಸಂಸದರಿದ್ದ ಸ್ಥಳಕ್ಕೆ ಜಿಗಿದಿದ್ದಾನೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಅಪರಿಚಿತ ಅನುಚಿತವಾಗಿ ವರ್ತಿಸಿದ್ದರಿಂದ ಸದಸ್ಯರು ಬೆಚ್ಚಿಬಿದ್ದರು. ಆತನ ಕೃತ್ಯಕ್ಕೆ ಸಂಸದರು ಪ್ರತಿರೋಧ ಒಡ್ಡಿದಾಗ ಆತ ಸಂಸದರ ಆಸನ ಹಾಗೂ ಮೇಜುಗಳ ಮೇಲೆ ಹತ್ತಿ ರಂಪಾಟ ಪ್ರದರ್ಶಿಸಿದ್ದಾನೆ. ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಜಿಗಿಯುತ್ತಲೇ ಭದ್ರತಾ ವಿಚಾರದಲ್ಲಿ ಕಣ್ಣಾ ಮುಚ್ಚಾಲೆ ಆಡಿದ್ದಾನೆ. ಕಂಡ ಸದನದೊಳಗಿದ್ದ ಸಂಸದರು ಗಾಬರಿಯಿಂದ ಹೊರ ಓಡಿದ್ದಾರೆ.
This is how the person jumped from the Visitor Gallery into the Lok Sabha and tried to run towards the Speaker’s Chair. MPs sitting nearby nabbed him. It’s shocking to see such a major security breach inside Parliament. #ParliamentAttack #SecurityBreach #LokSabha pic.twitter.com/8lp5MQxJV2
— Uncut Version International (@uncutversion123) December 13, 2023
ಈ ಕಿಡಿಗೇಡಿಗಳು ಕಲರ್ ಸ್ಪ್ರೇ ಸಾಧನವನ್ನೂ ಸದನಕ್ಕೆ ಕೊಂಡೊಯ್ದಿದ್ದಾರೆ. ಇವರು ವಿಚಿದ್ರಕಾರಿ ಕೃತ್ಯ ನಡೆಸುವ ಯತ್ನದಲ್ಲಿದ್ದರು ಎನ್ನಲಾಗಿದೆ. ಆದರೆ ಯಾವುದೇ ಹಾನಿಯಾಗಲು ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಈ ಘಟನೆಯಿಂದಾಗಿ ಸಂಸತ್ ಭವನದಲ್ಲಿ ಆತಂಕದ ಸನ್ನಿವೇಶ ಸೃಷ್ಟಿಯಾಯಿತು. ಈ ಕಾರಣದಿಂದಾಗಿ ಸದನವನ್ನು ಕೆಲಹೊತ್ತು ಮುಂದೂಡಲಾಯಿತು. ಅದಾಗಲೇ ಸದನದಲ್ಲಿ ರಂಪಾಟ ಮಾಡಿರುವ ಅಪರಿಚಿತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.


















































